ಆನೇಕಲ್: ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ, ಶೈಕ್ಷಣಿಕ ಸಹಾಯಧನ, ಪಿಂಚಣಿ ಮುಂತಾದ ಕಲ್ಯಾಣ ಸೌಲಭ್ಯವನ್ನು ಬಜೆಟ್‌ನಲ್ಲಿ ಜಾರಿಗೆ ತರಬೇಕೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಒತ್ತಾಯಿಸಿದರು.
ತಾಲ್ಲೂಕಿನ ಚಂದಾಪುರದಲ್ಲಿ ನಡೆದ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ 14ನೇ ಸಮ್ಮೇಳನದಲ್ಲಿ ಮಾತನಾಡಿದರು.
ಕಾರ್ಮಿಕರ ದೇಶದ ಆಸ್ತಿ. ದೇಶದ ಆರ್ಥಿಕ ವ್ಯವಸ್ಥೆ ಬೆಳವಣಿಗೆಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಆದರೆ ಸರ್ಕಾರಗಳು ಕಾರ್ಮಿಕರ ಸ್ನೇಹಿಯಾಗಿರದೇ ಕಾರ್ಮಿಕರ ವಿರುದ್ಧ ನೀತಿಗಳನ್ನು ಅನುಸರಿಸುತ್ತಿವೆ. ಕಾರ್ಮಿಕ ವಿರುದ್ಧವಾಗಿರುವ ಜಾರಿಗೆಗೊಳಿಸುತ್ತಿರುವ ಹೊಸ ಕಾನೂನುಗಳನ್ನು ಅನುಷ್ಠಾನಗೊಳಿಸಬಾರದು. ದುಡಿಯುವ ಜನರ ಕೈ ಬಲಪಡಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ರೈತ ಹೋರಾಟಗಾರ ಹಂದೇನಹಳ್ಳಿ ರಾಮಚಂದ್ರರೆಡ್ಡಿ, ತಾಲ್ಲೂಕಿನಲ್ಲಿ ರೈತರ ವಿರುದ್ಧ ಸರ್ಕಾರ ಸಂಘಟಿತವಾಗಿ ಅನ್ಯಾಯ ಎಸಗುತ್ತಿದೆ. ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ಹೊರಟಿರುವ ಸರ್ಕಾರ ಕ್ರಮದಿಂದಾಗಿ ರೈತರಿಗೆ ದ್ರೋಹವಾಗುತ್ತಿದೆ. ಸಾವಿರಾರು ಎಕರೆ ರೈತರ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ಹೊರಟಿರುವುದು ಖಂಡನೀಯ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಜಿಲ್ಲಾ ಉಪಾಧ್ಯಕ್ಷ ಡಿ.ಮಹದೇಶ್, ಮುಖಂಡರಾದ ಲಕ್ಷ್ಮೀ, ಬಾಲರಾಜು, ದೇವಿಕಾ, ಸುರೇಶ್, ಸುನೀಲ್, ಚಿನ್ನಪ್ಪ, ಅಶೋಕ್ ಕುಮಾರ್, ವೆಂಕಟೇಶ್ ರೆಡ್ಡಿ, ದೇವರಾಜು, ನಾಗೇಶ್, ಥಾಮಸ್, ಕಪನಿಗೌಡ, ಬಸಮ್ಮ, ಸುನೀಲ್ ಕುಮಾರ್, ಶಶಿಕಲಾ, ಪ್ರಮೀಳಾ, ಹನುಮಯ್ಯ, ನಟರಾಜ್, ಸತ್ಯನಾರಾಯಣಪ್ಪ, ಶಿವಕುಮಾರ್, ನಾಗರಾಜು, ರುದ್ರಪ್ಪ, ಮಂಜು ಇದ್ದರು.
ರಾರಾಜಿಸಿದ ಕೆಂಬಾವುಟ: ಸಿಐಟಿಯು ಜಿಲ್ಲಾ ಸಮ್ಮೇಳನ ಹಿನ್ನೆಲೆಯಲ್ಲಿ ಚಂದಾಪುರದಲ್ಲಿ ಕೆಂಪು ಧ್ವಜಗಳು ರಾರಾಜಿಸಿದವು. ಚಂದಾಪುರದ ಪ್ರಮುಖ ಬೀದಿಗಳಲ್ಲಿ ಸಿಐಟಿಯು ಕಾರ್ಯಕರ್ತರು ಮೆರವಣಿಗೆ ನೆಡಸಿ ಸಂತೆ ಮೈದಾನದಲ್ಲಿ ಜಮಾವಣೆಗೊಂಡರು.
ಆನೇಕಲ್ ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಈ ಭಾಗದಲ್ಲಿ ಪ್ರಗತಿಯಲ್ಲಿರುವ ಇಎಸ್‌ಐ ಕಾಮಗಾರಿಗೆ ವೇಗ ನೀಡಬೇಕುಮೀನಾಕ್ಷಿ ಸುಂದರಂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಐಟಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.