ADVERTISEMENT

ರೋಟರಿ ಅಧ್ಯಕ್ಷರಾಗಿ ವಿಜಯ್ ಕುಮಾರ್ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 2:43 IST
Last Updated 8 ಏಪ್ರಿಲ್ 2021, 2:43 IST
ಹೊಸಕೋಟೆ ತಾಲ್ಲೂಕು ರೋಟರಿ ಸಂಸ್ಥೆಗೆ ಪುನರಾಯ್ಕೆಯಾದ ವಿ. ವಿಜಯ್ ಕುಮಾರ್ ಅವರಿಗೆ ಗೌವರ್ನರ್‌ ಫಜಲ್ ಮಮೂದ್ ನೇಮಕಾತಿ ಪತ್ರ ವಿತರಿಸಿದರು
ಹೊಸಕೋಟೆ ತಾಲ್ಲೂಕು ರೋಟರಿ ಸಂಸ್ಥೆಗೆ ಪುನರಾಯ್ಕೆಯಾದ ವಿ. ವಿಜಯ್ ಕುಮಾರ್ ಅವರಿಗೆ ಗೌವರ್ನರ್‌ ಫಜಲ್ ಮಮೂದ್ ನೇಮಕಾತಿ ಪತ್ರ ವಿತರಿಸಿದರು   

ಹೊಸಕೋಟೆ: ತಾಲ್ಲೂಕಿನ ರೋಟರಿ ಸಂಸ್ಥೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಬೇಕು ಎಂದು ಇಂಟರ್‌ನ್ಯಾಷನಲ್ ರೋಟರಿ ಸಂಸ್ಥೆ ಅಧ್ಯಕ್ಷ ಶೇಖರ್ ಮೆಹತ ತಿಳಿಸಿದರು.

154 ಕ್ಲಬ್‌ಗಳ ನೂತನ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ವಿ. ವಿಜಯ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಗೌವರ್ನರ್ ಡಿ.ಎಸ್. ರಾಜಕುಮಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷ ಬಚ್ಚಣ್ಣ, ಮಾಜಿ ಅಧ್ಯಕ್ಷರಾದ ಡಾ.ನಟರಾಜ್, ಡಾ.ನಾಗರಾಜ್, ನಿರ್ದೇಶಕರಾದ ಪ್ರಭಾಕರ್‌, ಕಾರ್ಯದರ್ಶಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.