ADVERTISEMENT

ವಿಜಯಪುರ ತಾಲ್ಲೂಕು ಕೇಂದ್ರಕ್ಕೆ ವಿರೋಧ ಇಲ್ಲ: ಶಾಸಕ ನಿಸರ್ಗ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 3:51 IST
Last Updated 15 ಜನವರಿ 2021, 3:51 IST
ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಸ್.ಬಿ.ಜಿ.ಕಬ್ಬಡಿ ಕಪ್ ಟೂರ್ನಿಮೆಂಟ್‌ನ್ನು ಸ್ವಾಭಿಮಾನಿ ಪಕ್ಷದ ಮುಖಂಡ ಡಾ.ಎಚ್.ಎಂ.ಸುಬ್ಬರಾಜ್ ಉದ್ಘಾಟಿಸಿದರು
ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಸ್.ಬಿ.ಜಿ.ಕಬ್ಬಡಿ ಕಪ್ ಟೂರ್ನಿಮೆಂಟ್‌ನ್ನು ಸ್ವಾಭಿಮಾನಿ ಪಕ್ಷದ ಮುಖಂಡ ಡಾ.ಎಚ್.ಎಂ.ಸುಬ್ಬರಾಜ್ ಉದ್ಘಾಟಿಸಿದರು   

ದೇವನಹಳ್ಳಿ: ’ತಾಲ್ಲೂಕಿನ ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಲು ನನ್ನ ವಿರೋಧವಿಲ್ಲ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ವಿಜಯಪುರವನ್ನು ತಾಲ್ಲೂಕು ಕೇಂದ್ರ ಮಾಡಲು ಶಾಸಕರಿಗೆ ಆಸಕ್ತಿ ಇಲ್ಲ. ಶಾಸಕರ ಸಭೆ –ಸಮಾರಂಭಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದೆಂದು ಕನಕರಾಜು ಮತ್ತು ಬಿ.ಕೆ.ಶಿವಪ್ಪ ಎಂಬುವರು ಹೇಳಿಕೆ ನೀಡಿದ್ದಾರೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ಬರೀ ಪ್ರಚಾರಕ್ಕಾಗಿ ಹೇಳಿಕೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಜಯಪುರ ಮತ್ತು ದೇವನಹಳ್ಳಿ ಪುರಸಭೆಗಳನ್ನು ಅವಳಿ ನಗರ ಸಭೆ ಮಾಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಉಸ್ತುವಾರಿ ಸಚಿವ ಆರ್.ಆಶೋಕ್‌ ಅವರಿಗೂ ಮನವಿ ಮಾಡಲಾಗಿದೆ. ತಾಲ್ಲೂಕು ಕೇಂದ್ರಕ್ಕೆ ಶಿಫಾರಸು ಮಾಡಬೇಕಾದರೆ ವಿಜಯಪುರ ಸಭೆ ಸದಸ್ಯರು, ವಿಜಯಪುರ ಮತ್ತು ಚನ್ನರಾಯಪಟ್ಟ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬಹಿರಂಗ ಸಭೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕು. ಆದರೆ. ಏಕಾಏಕಿ ಶಾಸಕರ ವಿರುದ್ಧ ಕಪ್ಪು‍ ಬಾವುಟ ಪ್ರದರ್ಶಿಸುವುದರಲ್ಲಿ ಅರ್ಥವಿಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.