ADVERTISEMENT

ವಿಜಯಪುರ: ಸಾಮೂಹಿಕ ಶಿವ ಪಂಚಾಕ್ಷರಿ ಮಂತ್ರ ಪಠಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 2:51 IST
Last Updated 24 ಆಗಸ್ಟ್ 2025, 2:51 IST
ವಿಜಯಪುರ ಚನ್ನಕೇಶವ ಸ್ವಾಮಿ ದೇಗುಲ ಆವರಣದಲ್ಲಿ ನಡೆದ ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು.
ವಿಜಯಪುರ ಚನ್ನಕೇಶವ ಸ್ವಾಮಿ ದೇಗುಲ ಆವರಣದಲ್ಲಿ ನಡೆದ ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು.   

ವಿಜಯಪುರ(ದೇವನಹಳ್ಳಿ): ಇಲ್ಲಿಯ ಚನ್ನಕೇಶವ ದೇವಾಲಯ ಆವರಣದಲ್ಲಿ ಈಚೆಗೆ ಸಾಮೂಹಿಕ ಶಿವ ಪಂಚಾಕ್ಷರಿ ಮಂತ್ರ ಪಠಣೆ ಕಾರ್ಯಕ್ರಮ ನಡೆಯಿತು.

ಧರ್ಮಸ್ಥಳದಲ್ಲಿ ಶ್ರದ್ಧೆ ಭಕ್ತಿ ಬೆಳಗಿ, ಶಾಂತಿ ನೆಲಸಲಿ ಎಂಬ ಸಂಕಲ್ಪದೊಂದಿಗೆ ರಾಜ್ಯದಾದ್ಯಂತ ಒಂದು ವಾರ ಸಾಮೂಹಿಕ ಶಿವಪಂಚಾಕ್ಷರಿ  ಜಪ ಪಠಣ ಮಾಡಲು ತಾಲೂಕು ವಿಶ್ವ ಹಿಂದೂ ಪರಿಷದ್, ಬಜರಂಗದಳ, ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು. 

ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂಗಮೇಶ್ವರ ಧರ್ಮಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಕಾಂತ್ ಕುಮಾರ್  ಒತ್ತಾಯಿಸಿದರು.
ಧರ್ಮಸ್ಥಳ ಪವಿತ್ರ ಶ್ರದ್ಧಾಕೇಂದ್ರ. ಇಂತಹ ಕ್ಷೇತ್ರದಲ್ಲಿ ಧರ್ಮ ವಿರೋಧಿ ಕೆಲಸಗಳಾಗುತ್ತಿರುವುದು ಹಿಂದೂಗಳಿಗೆ ಮಾಡುತ್ತಿರುವ ಅವಮಾನ ಎಂದು ಬಜರಂಗದಳ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಹೇಳಿದರು.

ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ರಘು ಮಾತನಾಡಿದರು. ಮಹಂತಿನ ಮಠ ಧರ್ಮ ಸಂಸ್ಥೆಯ ಖಜಾಂಚಿ ಎ.ಮಧು,  ರವಿ, ಮಣಿ  ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.