ADVERTISEMENT

ಆನೇಕಲ್ | ಕಾಡಾನೆ ಹಿಂಡು ಪ್ರತ್ಯಕ್ಷ್ಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 2:07 IST
Last Updated 30 ಆಗಸ್ಟ್ 2025, 2:07 IST
ಆನೇಕಲ್ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಗುಮ್ಮಳಾಪುರದಲ್ಲಿ ಕಾಡಾನೆಗಳು ಸಿಸಿಕ್ಯಾಮರದಲ್ಲಿ ಸೆರೆಯಾಗಿರುವುದು
ಆನೇಕಲ್ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಗುಮ್ಮಳಾಪುರದಲ್ಲಿ ಕಾಡಾನೆಗಳು ಸಿಸಿಕ್ಯಾಮರದಲ್ಲಿ ಸೆರೆಯಾಗಿರುವುದು   

ಆನೇಕಲ್ : ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಗುಮ್ಮಳಾಪುರ ಸುತ್ತಮುತ್ತ ಕಾಡಾನೆಗಳ ಓಡಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆನೇಕಲ್‌ ತಾಲ್ಲೂಕಿನ ಮುತ್ಯಾಲಮಡುವು, ಮೆಣಸಿಗನಹಳ್ಳಿ, ಸೋಲೂರು ಆಸು ಪಾಸಿನಲ್ಲಿಯೂ ಕಾಡಾನೆಗಳ ಹಿಂಡು ಓಡಾಡುತ್ತಿವೆ. ಸೋಲೂರು ಸುತ್ತಮುತ್ತ ಕಳೆದ 10-15 ದಿನಗಳಿಂದಲೂ ಒಂಟಿ ಸಲಗವೊಂದು ಓಡಾಡುತ್ತಿತ್ತು. ಗುರುವಾರ ಮತ್ತು ಶುಕ್ರವಾರ ಮೂರು ಕಾಡಾನೆಗಳ ಓಡಾಟ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಾಡಾನೆಗಳ ಓಡಾಟ ಗಡಿಯ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT