ADVERTISEMENT

ಆನೇಕಲ್ | 'ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ '

 ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 2:21 IST
Last Updated 30 ಆಗಸ್ಟ್ 2025, 2:21 IST
ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ಮತ್ತು ಆಹಾರ ಧಾನ್ಯ ವಿತರಣಾ ಕೇಂದ್ರವನ್ನು ಸಂಸದ ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. ಶಾಸಕ ಬಿ.ಶಿವಣ್ಣ ಇದ್ದರು.  
ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ಮತ್ತು ಆಹಾರ ಧಾನ್ಯ ವಿತರಣಾ ಕೇಂದ್ರವನ್ನು ಸಂಸದ ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. ಶಾಸಕ ಬಿ.ಶಿವಣ್ಣ ಇದ್ದರು.     

ಆನೇಕಲ್: ವಿಧಾನಸಭೆ ಮತ್ತು ಲೋಕಸಭೆಯಂತೆ ಸ್ಥಳೀಯ ಸಂಸ್ಥೆಗಳಲ್ಲೂ ಶೇ.33ರಷ್ಟು ಮೀಸಲಾತಿ ದೊರಯಬೇಕು. ಇದರಿಂದಾಗಿ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜಲಜೀವನ್‌ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಗ್ರಾಮಗಳು ಅಭಿವೃದ್ಧಿ ಹೊಂದಿವೆ ಎಂದು ಶ್ಲಾಘಿಸಿದರು. 

ADVERTISEMENT

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದವರು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಬಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಸಂತ್‌ ರೆಡ್ಡಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಗ್ಯಾರಂಟಿ  ಅನುಷ್ಠಾನ ಸಮಿತಿ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಬಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೋದೇವಿ ಗಣೇಶ್‌, ಬಗರ್‌ಹುಕುಂ ಸಾಗುವಳಿ ಸಮಿತಿ ಸದಸ್ಯ ಬಳ್ಳೂರು ನಾರಾಯಣಸ್ವಾಮಿ, ಸಿಡಿಪಿಓ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಳ್ಳೂರು ಮಧುಕುಮಾರ್, ಶಿಲ್ಪ ಭಾಸ್ಕರ್‌, ಅಶೋಕ್‌, ಸತೀಶ್‌, ಗಂಗಮ್ಮ, ರೂಪಾವತಿ, ಸವಿತಾ, ಮಂಜುನಾಥ್‌, ಸುಪ್ರಿಯ, ಮಂಜುನಾಥ್‌, ನಾಗರಾಜು, ಲಕ್ಷ್ಮಮ್ಮ, ತಾಜುನಿಸ್ಸಾ, ಹರೀಶ್‌, ವಿಜಯಮ್ಮ, ನಾರಾಯಣಸ್ವಾಮಿ, ವೆಂಕಟೇಶ್, ಲತಾ, ಮಂಜುಳ, ಮುಖಂಡರಾದ ಬಳ್ಳೂರು ಮುನಿವೀರಪ್ಪ, ಬಾಬು, ಅಭಿ ಇದ್ದರು.

ಕಾಮಗಾರಿಗೆ ಚಾಲನೆ ಬಳ್ಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಗ್ರಂಥಾಲಯ ಕಟ್ಟಡ ಶುದ್ಧ ಕುಡಿಯುವ ನೀರಿನ ಘಟಕ ಶಾಲಾ ಕಟ್ಟಡ ಉದ್ಘಾಟನೆ ದಾಸನಪುರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ಅರೇಹಳ್ಳಿ ಗ್ರಾಮದಲ್ಲಿ ಪಡಿತರ ಆಹಾರ ಧಾನ್ಯ ವಿತರಣಾ ಕಟ್ಟಡ ಉದ್ಘಾಟನೆ ಕೊಡಲಿಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಸದರು ಭೂಮಿಪೂಜೆ ನೆರವೇರಿಸಿದರು. ಹಳೇಹಳ್ಳಿಯಲ್ಲಿ ಅಂಗನವಾಡಿ ಕಟ್ಟಡದ ಉದ್ಘಾಟನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಭೂಮಿಪೂಜೆ ಬಳ್ಳೂರಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಕಾಂಪೌಂಡ್‌ ಪುನರ್‌ ನವೀಕರಣಕ್ಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಸ್ತ್ರೀಶಕ್ತಿ ಸಂಘಕ್ಕೆ ಲ್ಯಾಪ್‌ಟಾಪ್‌ ಮತ್ತು ಪರಿಕರ ಹಾಗೂ ಅಂಗವಿಕಲರಿಗೆ ಪ್ರೋತ್ಸಾಹಧನದ ಚೆಕ್‌  ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.