ಆನೇಕಲ್: ವಿಶ್ವ ಹುಲಿ ದಿನದ ಪ್ರಯುಕ್ತ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಂಗಳವಾರ ಹುಲಿ ಸಂರಕ್ಷಣೆ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರವಾಸಿಗರು ಮತ್ತು ಸಾರ್ವಜನಿಕರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಪ್ರವಾಸಿಗರು ಹುಲಿ ಕುಣಿತದ ಮೂಲಕ ಗಮನ ಸೆಳೆದರೆ, ಮಕ್ಕಳು ಹುಲಿ ಚಿತ್ರವನ್ನು ಮುಖದ ಮೇಲೆ ಬಿಡಿಸಿಕೊಂಡು ಖುಷಿ ಪಟ್ಟರು.
ಪಗ್ ಮಾರ್ಕ್, ಚಿತ್ರ ರಚನೆ, ಸಂವಾದ, ಚಲನಚಿತ್ರಗಳ ಮಾಹಿತಿ, ನಡವಳಿಕೆ ಹುಲಿ ಸಂರಕ್ಷಣೆ ಜೊತೆಗೆ ಜೀವ ವೈವಿಧ್ಯತೆ ಮಹತ್ವವನ್ನ ಸಾರ್ವಜನಿಕರಿಗೆ ತಿಳಿಸಲಾಯಿತು.
ಅನುಷ್ಕಾ ಎಂಬ ಹುಲಿಗೆ ಮೃಗಾಲಯದಲ್ಲಿ ವಿಶೇಷ ಪುಷ್ಟೀಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಲಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಮೃಗಾಲಯಗಳ ಪಾತ್ರ ಅತ್ಯಂತ ಪ್ರಮುಖವಾಗಿವೆ. ಹುಲಿಗಳ ಜೀವನ ಮತ್ತು ಸಂರಕ್ಷಣೆಯ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಜೈವಿಕ ಉದ್ಯಾನಗಳು ತೊಡಗಿಕೊಂಡಿವೆ. ಬನ್ನೇರುಘಟ್ಟದಲ್ಲಿ ಒಟ್ಟು 25 ಹುಲಿಗಳಿವೆ ಎಂದು ಉದ್ಯಾನದ ಕಾರ್ಯ ನಿರ್ವಹಣಾಧಿಕಾರಿ ಸೂರ್ಯಸೇನ್ ತಿಳಿಸಿದರು.
1ರಿಂದ ಬನ್ನೇರುಘಟ್ಟ ಪ್ರವೇಶ ದರ ಹೆಚ್ಚಳ ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಪ್ರಸ್ತುತ ಪ್ರಾಣಿಗಳ ಪೋಷಣೆ ಇಂಧನ ವೆಚ್ಚ ಮತ್ತು ಇತರ ಆಡಳಿತ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಮೃಗಾಲಯದ ಪ್ರವೇಶ ಟಿಕೆಟ್ ದರಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕತ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
* ಮೃಗಾಲಯ ಪರಿಷ್ಕತ ದರ: ವಯಸ್ಕರರು ₹120ಮಕ್ಕಳು ₹60 ಹಿರಿಯ ನಾಗರಿಕರು ₹70
* ಚಿಟ್ಟೆಗಳ ಪಾರ್ಕ್ ಪ್ರವೇಶ ದರ ವಯಸ್ಕರರು ₹50 ಮಕ್ಕಳಿಗೆ ₹30 ಹಿರಿಯ ನಾಗರಿಕರಿಗೆ ₹30
* ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ಎರಡೂ ಸೇರಿ ವಯಸ್ಕರರು ₹170ಮಕ್ಕಳಿಗೆ ₹90ಹಿರಿಯ ನಾಗರಿಕರು ₹100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.