ADVERTISEMENT

ಅರವಳಿಕೆ ಶಾಸ್ತ್ರ: ಇನ್ನಷ್ಟು ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 6:35 IST
Last Updated 13 ಫೆಬ್ರುವರಿ 2012, 6:35 IST

ಬೆಳಗಾವಿ: `ಅರವಳಿಕೆ ಶಾಸ್ತ್ರದ ಬಳಕೆ ಪುರಾತನ ಕಾಲದಿಂದಲೂ ಇದೆ. ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಸುಲಲಿತವಾಗಿ ಮಾಡಲಾಗುತ್ತಿದ್ದು, ಆ ಬಗೆಗೆ ಅಧ್ಯಯನವಾಗಬೇಕಿದೆ~ ಎಂದು ಬೆಳಗಾವಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಚಂದ್ರಶೇಖರ ಅಭಿಪ್ರಾಯ ಪಟ್ಟರು.  

ನಗರದ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜಿನಲ್ಲಿ ಅರವಳಿಕೆ ವಿಭಾಗದಿಂದ ಆಯೋಜಿಸಲಾಗಿದ್ದ ಭಾರತೀಯ ಅರವಳಿಕೆ ಸಂಘದ ಮೂರನೆಯ ಸಮಾವೇಶದಲ್ಲಿ ಅವರು ಮಾತನಾಡಿದರು.

`ಪ್ಲಾಸ್ಟಿಕ್ ಸರ್ಜರಿ, ಮೂಳೆ ಮುಂತಾದ ಚಿಕಿತ್ಸೆಗಳಿಗೆ ಅವರು ಆಗಲೇ ಚಿಕಿತ್ಸೆ ನೀಡುತ್ತಿದ್ದರು. ಆ ಕುರಿತು ಸಂಶೋಧನೆ ಕೈಗೊಳ್ಳಬೇಕು~ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಚಂದ್ರಕಾಂತ ಕೋಕಾಟೆ, ಸಸ್ಯಶಾಸ್ತ್ರಗಳಲ್ಲಿ ಅನೇಕ  ಅರವಳಿಕೆ  ಸಸ್ಯಗಳಿದ್ದು ಆ ಕುರಿತು ಸಂಶೋಧನೆಯಾಗಬೇಕು  ಎಂದರು.

ಡಾ.ಪಿ.ಎಫ್. ಕೋಟೂರ, ಸಂಘದ ಮುಖ್ಯಸ್ಥ ಡಾ.ಡಿ.ಡಿ.ಪುರಾಣಿಕ ಮಾತನಾಡಿದರು. ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ, ಸಂಘದ  ಕಾರ್ಯದರ್ಶಿ  ಡಾ.ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.  ಡಾ.ಸಂಗೀತಾ ಜಹಾಗೀರದಾರ ಪ್ರಾರ್ಥಿಸಿದರು. ಡಾ.ಹೇಮಂತ ತೋಷಿಖಾನೆ ನಿರೂಪಿಸಿದರು. ಡಾ.ಕೀಶೋರಕುಮಾರ ಹುಲ್ಲತ್ತಿ ವಂದಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.