ADVERTISEMENT

ಆರೋಗ್ಯ, ಏಕಾಗ್ರತೆಗೆ ಕ್ರೀಡೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2011, 10:40 IST
Last Updated 29 ಜುಲೈ 2011, 10:40 IST

ಬೆಳಗಾವಿ: `ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲಿಕ್ಕೆ ಆಗುವುದಿಲ್ಲ ಎನ್ನುವ ಭಾವನೆ ಪೋಷಕರದ್ದಾಗಿದೆ. ಆದರೆ ಇದು ತಪ್ಪು~ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ ಅಭಿಪ್ರಾಯಪಟ್ಟರು.

ನಗರದ ಗೋಗಟೆ ಪದವಿಪೂರ್ವ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜಿಮ್ಖಾನಾ ಮತ್ತು ಕ್ರೀಡಾ ಚಟು ವಟಿಕೆಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

`ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಹಾಗೂ ಏಕಾಗ್ರತೆ ಸುಧಾರಿಸುತ್ತದೆ. ಇದು ಉತ್ತಮ ಓದಿಗೆ ಅನುಕೂಲವಾಗುತ್ತದೆ. ಮಧುಮೇಹ ಬಂದಾಗ ವಾಕಿಂಗ್ ಹೋಗುವುದಲ್ಲ. ದೈಹಿಕ ಸದೃಢತೆ
ದೃಷ್ಟಿಯಲ್ಲಿಟ್ಟುಕೊಂಡು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು~ ಎಂದು ಅವರು ಹೇಳಿದರು.

`ಕ್ರೀಡೆಯನ್ನು ವೃತ್ತಿಯಾಗಿ ತೆಗೆದು ಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಕ್ರೀಡೆಯ ಜತೆಗೆ ಓದಿಗೂ ಮಹತ್ವ ನೀಡಬೇಕು~ ಎಂದು ಅವರು ತಿಳಿಸಿದರು.

`ನಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಾವು ಕೋರ್ಸ್ ಆಯ್ದುಕೊಳ್ಳಬೇಕು. ಇನ್ನೊಬ್ಬರು ಸೇರಿಕೊಂಡಿದ್ದಾರೆ ಎಂದು ಸೇರಿಕೊಳ್ಳು ವುದು ಬೇಡ. ಭವಿಷ್ಯದಲ್ಲಿ ಯಾವ ಕೋರ್ಸ್ ಸೇರಿದರೆ ಉತ್ತಮ ಎಂಬು ದನ್ನು ಗಮನಿಸಿ ಆಯ್ಕೆ ಮಾಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಂದುವರಿಯಿರಿ~ ಎಂದು ಅವರು ಸಲಹೆ ಮಾಡಿದರು.

`ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮ, ಸಮನಾಗಿ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ದೈಹಿಕ ಸಾಮರ್ಥ್ಯ ಲಭ್ಯವಾಗುತ್ತದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ~ ಎಂದು ಅವರು ಅವರು ಹೇಳಿದರು.

ಅತಿಥಿಯಾಗಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ತಗರೆ ಮಾತನಾಡಿದರು.
ಕರ್ನಾಟಕ ಕಾನೂನು ಸಂಸ್ಥೆ ಅಧ್ಯಕ್ಷ ಎ.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ.ಎ.ಎಸ್. ಕೆರೂರ, ವಿದ್ಯಾರ್ಥಿ ಪ್ರತಿನಿಧಿಗಳ ಕಾರ್ಯದರ್ಶಿ ಸೂರಜ್ ಪಾಟೀಲ, ವಿದ್ಯಾರ್ಥಿನಿಯರ ಪ್ರತಿನಿಧಿ ಶ್ರುತಿ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.