ADVERTISEMENT

`ಕನಸು ನನಸಾಗಿಸಲು ಸಹಕಾರ ನೀಡಿ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:51 IST
Last Updated 24 ಜೂನ್ 2013, 5:51 IST

ಸವದತ್ತಿ: `ಬೈಲಹೊಂಗಲ ತಾಲ್ಲೂಕಿನೊಂದಿಗೆ ಸವದತ್ತಿ ತಾಲ್ಲೂಕಿನ 36 ಹಳ್ಳಿಗಳು ನನ್ನ ಕ್ಷೇತ್ರದಲ್ಲಿ ಬರುವುದ ರಿಂದ ಅವುಗಳ ಪ್ರಗತಿಯೊಂದಿಗೆ ಮಹತ್ತರ ಯೋಜನೆಗಳನ್ನು ಜಾರಿಗೆ ತರುವ ಕನಸು ಕಂಡಿದ್ದೇನೆ. ಅದಕ್ಕೆ ನಿಮ್ಮ ಸಹಾಯ ಸಹಕಾರ ಅಗತ್ಯ' ಎಂದು ಬೈಲಹೊಂಗಲ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಶನಿವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಳಿಸೋಣ, ಇನ್ನೂ ಮುಂದೆ ನಿಮ್ಮಗಳ ಮಾರ್ಗದರ್ಶನದಲ್ಲಿ ಪ್ರಗತಿಗೆ ಪ್ರಥಮ ಆದ್ಯತೆ ನೀಡೋಣ ಎಂದರು.

ಕಳಸಾ-ಬಂಡೂರಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪಅವರು 100 ಕೋಟಿ ಹಣ ಮಂಜೂರು ಮಾಡಿದ್ದರು. ನಂತರ ಆ ಕಾಮಗಾರಿ ನಿಧಾನಗತಿ ಸಾಗಿದ್ದು, ಅದನ್ನು ಚುರುಕುಗೊಳಿಸುವುದು, ಅರ್ಧಕ್ಕೆ ನಿಂತಿರುವ ಇಲ್ಲಿನ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಚಚಡಿ ಏತ ನೀರಾವರಿ ಆರಂಭಿಸಬೇಕಿದೆ. ಇದಕ್ಕೆ ನಿಮ್ಮೆಲ್ಲಾ ಸಹಕಾರ ಅವಶ್ಯವಿದೆ ಎಂದು ಹೇಳಿದರು.

ಜಿ.ಪಂ. ಸದಸ್ಯ ಮಂಜುನಾಥ ಬಾನಿ,  ವಿಶ್ವನಾಥ ಪಾಟೀಲರು, ಎಲ್ಲ ವರ್ಗದವರ ಕಲ್ಯಾಣಕ್ಕೆ ಶ್ರಮಿಸುವರು ಎಂದರು.
ತಾ.ಪಂ. ಅಧ್ಯಕ್ಷ ಸುರೇಶ ಹಾರೋಬಿಡಿ, ಉಪಾಧ್ಯಕ್ಷ ಹನಮಂತ ಚನ್ನಬಸಪ್ಪನವರ, ಜಿ.ಪಂ ಸದಸ್ಯರಾದ ಲಕ್ಷ್ಮಣ ದೊಡಮನಿ, ರತ್ನವ್ವ ತೇಗೂರ, ತಾ.ಪಂ. ಇಒ ವಿ.ಜಿ. ಹಿತ್ತಲಮನಿ, ಬಿಇಒ ಎಸ್.ಸಿ.ಕರೀಕಟ್ಟಿ, ಜಿ.ಪಂ. ಎಂಜಿನಿಯರ್ ರಬಕವಿ, ಎಡಿಎ ಹದೇವ ಯರಗೊಪ್ಪ, ಡಾ. ಪದರಾ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.