ADVERTISEMENT

ಕೃಷಿ ಕಾರ್ಯದಲ್ಲಿ ಅನ್ನದಾತ ಮಗ್ನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 9:20 IST
Last Updated 18 ಜೂನ್ 2011, 9:20 IST

ಯಮಕನಮರಡಿ: ಹೋಬಳಿಯಲ್ಲಿ ಮಿರಗಾ ಮಳೆಯ ಮೊದಲ ಹಂತದಲ್ಲೇ ಬಿತ್ತನೆ ಮಾಡುವ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿದೆ. ಕೆಲವು ಕೃಷಿಕರು ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕಳೆದ ವಾರ ರೋಹಿಣಿ ಮಳೆಯು ಅಲ್ಪ ಸ್ವಲ್ಪ ಮಳೆಯಿಂದ ಶೇ. 30 ರಷ್ಟು ಬಿತ್ತನೆ ಕಾರ್ಯವನ್ನು ಕೃಷಿಕರು ನಡೆಸಿದ್ದರು. ಹೊಲ ಉಳುವುದು, ಕಳೇ (ಕಾಸಿಗೆ) ಆರಸುವುದು, ಸಾವಯುವ ಗೊಬ್ಬರ ಹಾಕುವ ಕಾರ್ಯ ಶೇಕಡಾ 60ರಷ್ಟು ಭೂಮಿಗಳಲ್ಲಿ ಮುಕ್ತಾಯಗೊಂಡಿದೆ.

ಹುಕ್ಕೇರಿ ತಾಲ್ಲೂಕಿನಾದ್ಯಂತ 70,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ.  ಈ ಕುರಿತು ಈಗಾಗಲೇ ವ್ಯಾಪಾರಸ್ಥರಲ್ಲಿ ಚರ್ಚೆಯೂ ಪ್ರಾರಂಭವಾಗಿದೆ. ಹುಕ್ಕೇರಿ ತಾಲ್ಲೂಕಿನಲ್ಲಿ ಹತ್ತಿ ಮತ್ತು ಸೊಯಾಬೀನ್ ಬೆಳೆ ಹೆಚ್ಚಾಗಲಿದ್ದು. ಇನ್ನುಳಿದ ಬೆಳೆಗಳಾದ ಜೋಳ, ಶೇಂಗಾ, ತಂಬಾಕು, ಗೋಧಿ ಗೋವಿನಜೋಳ, ಬಟಾಡೆ, ಉದ್ದು, ಸಜ್ಜೆ, ಹೆಸರು ಇತರೆ ಬೆಳೆಗಳನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.