ADVERTISEMENT

ಗುರಿ ತಲುಪಲು ಆತ್ಮಶಕ್ತಿ ಅವಶ್ಯಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 8:10 IST
Last Updated 19 ಜನವರಿ 2012, 8:10 IST

ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಬೇಕಾದರೆ ಆತ್ಮಶಕ್ತಿ, ಇಚ್ಛಾಶಕ್ತಿ ಮತ್ತು ಜ್ಞಾನಶಕ್ತಿ ಎಂಬ ಮೂರು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಳಗಾವಿ ಬಿ.ಕೆ. ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಬಿ.ಎಸ್. ನಾವಿ ಹೇಳಿದರು.

ಇಲ್ಲಿಯ ಸಿ. ಎಸ್. ಬೆಂಬಳಗಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಬೇಕಾದರೆ  ಗುರಿ ಸಾಧಿಸಬೇಕು ಎಂಬ ಸಂಕಲ್ಪ ಮತ್ತು ಉತ್ಸಾಹ ಇರಬೇಕು ಎಂದರು.

ಸಾಧಿಸಬೇಕು ಎಂಬ ಛಲ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ. ವಿದ್ಯಾರ್ಥಿಗಳು ಗುರಿಯೆಡೆಗೆ ಏಕಾಗ್ರತೆಯಿಂದ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿ ಸದಸ್ಯ ಟಿ. ದಾಮೋದರ ಮಾತನಾಡಿ,  ಈಗಿನ ಯುವ ಪೀಳಿಗೆಯಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ. ಅವರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯ, ಸಹಕಾರ, ಮಾರ್ಗದರ್ಶನ ನೀಡುವುದು ಪಾಲಕರ ಜವಾಬ್ದಾರಿಯಾಗಬೇಕು ಎಂದು ನುಡಿದರು.

ವಿಪ್ರಸ ಗೌರವ ಕಾರ್ಯದರ್ಶಿ ಎಸ್. ಐ. ಪುರಾಣಿಕ, ಪದವಿ ಪೂರ್ವ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಬಿ. ಸಿ. ಹಲ್ಯಾಳ, ಶಿಕ್ಷಣ ತಜ್ಞ ಪ್ರೊ. ವೆಂಕಟೇಶ ಹುಣಶಿಕಟ್ಟಿ, ಪ್ರಧಾನ ಕಾರ್ಯದರ್ಶಿ ನೇಹಾ ನೆಲ್ಲೂರ ಹಾಗೂ ವಾಣಿಜ್ಯ ಸಂಘದ ಕಾರ್ಯದರ್ಶಿ ಶ್ರೇಯಸ್ ಭಟ್  ಹಾಜರಿದ್ದರು.

ಪ್ರಾಚಾರ್ಯ ಆರ್.ಸಿ. ತಡಗಣಿ ಸ್ವಾಗತಿಸಿದರು. ಪ್ರೊ. ಎಸ್.ವಿ. ಗುದಗನವರ ನಿರೂಪಿಸಿದರು. ಜಿಮಖಾನಾ ಉಪಾಧ್ಯಕ್ಷ ಪ್ರೊ. ಎಂ. ಬಿ. ಪಾಟೀಲ ವಂದಿಸಿದರು.

ಬಂಜಾರ ರಕ್ಷಣಾವೇದಿಕೆಗೆ ಕಾಮೇಶ ಗೋಪಾಲ ಲಮಾಣಿ ನೇಮಕ
ರಾಯಬಾಗ:ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ ) ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಮುಗಳಖೋಡದ ಕಾಮೇಶ ಗೋಪಾಲ ಲಮಾಣಿ ಅವರನ್ನು ನೇಮಿಸಲಾಗಿದೆ. ರತ್ನಪ್ಪ ಕೃಷ್ಣಪ್ಪ ಲಮಾಣಿ ಉಪಾಧ್ಯಕ್ಷರಾಗಿ, ಪುಂಡಲೀಕ  ಪಾಂಡಪ್ಪ ಲಮಾಣಿ ಅವರನ್ನು ಪ್ರಧಾನ ಕಾರ್ಯದ ರ್ಶಿಯಾಗಿ ರಾಜ್ಯಾಧ್ಯಕ್ಷ ರಾಜು ನೇಮಕ ಮಾಡಿದ್ದಾರೆ ಎಂದು  ಪ್ರಧಾನ ಕಾರ್ಯದರ್ಶಿ ಪುಂಡಲೀಕ ಲಮಾಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.