ADVERTISEMENT

ಗ್ರಾಮೀಣ ಸಂಸ್ಕೃತಿ ಭಾರತೀಯ ಪರಂಪರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 4:30 IST
Last Updated 11 ಫೆಬ್ರುವರಿ 2012, 4:30 IST

ಕಲ್ಲೋಳಿ (ಗೋಕಾಕ): `ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಿಸಿಕೊಂಡು ಹೋಗುವುದು ಮಹತ್ವದ್ದಾಗಿದೆ~ ಎಂದು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಇಲ್ಲಿಗೆ ಮುಸಗುಪ್ಪಿ ಗ್ರಾಮ ಶ್ರೀ ಲಕ್ಷ್ಮಿ ಮತ್ತು ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಜಾತ್ರೆ ಹಬ್ಬಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸುವಂತೆ ಮನವಿ ಮಾಡಿದರು.

`ಗ್ರಾಮದ ಎಲ್ಲಮ್ಮೋ ದೇವಿಯ ಮಂದಿರಕ್ಕೆ ಸಂಸದ ಸುರೇಶ ಅಂಗಡಿ ಅವರ  ಅನುದಾನದಲ್ಲಿ ರೂ.3 ಲಕ್ಷ ಅನುದಾನ ಮಂಜೂರಾಗಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು~ ಎಂದರು.

ಈ ಸಂದರ್ಭದಲ್ಲಿ ಬಾಳಪ್ಪ ಕೊಳವಿ, ಸಾತಪ್ಪ ಕೊಳದುರ್ಗಿ, ಶಂಕರೆಪ್ಪ ಗಾಡವಿ, ದುಂಡಪ್ಪ ಪಂತೋಜಿ, ಉಮೇಶ ಆಸಿರೊಟ್ಟಿ, ಮಹಾಂತೇಶ ಕಲಪಡೆ, ಸುರೇಶ ಗೊಂದಿ, ಮುರಗೇಶ ಗಾಡವಿ, ಈಶ್ವರ ಗಾಡವಿ, ರಮೇಶ ಗಡಗಿ, ಬಸವರಾಜ ಗಾಡವಿ, ರಾಘವೇಂದ್ರ ಸೂರನ್ನವರ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.