ADVERTISEMENT

ನೊಂದವರಿಗೆ ನ್ಯಾಯ ಒದಗಿಸಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:44 IST
Last Updated 2 ಸೆಪ್ಟೆಂಬರ್ 2013, 6:44 IST

ಬೈಲಹೊಂಗಲ: `ನೊಂದ, ಅಸಹಾಯಕ ಜನರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ' ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಇಲ್ಲಿಯ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಶಾಸಕ ಡಿ.ಬಿ. ಇನಾಮದಾರ ಮಾತನಾಡಿ `ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಲ್ಲ, ಅಧಿಕಾರ ಇದ್ದಾಗ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರನ್ನು ಸತ್ಕರಿಸಲಾಯಿತು. ಪುರಸಭೆ ಸದಸ್ಯರಾದ ಬಸವರಾಜ ಕಲಾದಗಿ, ನಿಸ್ಸಾರ್‌ಅಹ್ಮದ್ ತಿಗಡಿ, ಎ.ಆರ್. ಪಾಟೀಲ, ಶಿರಸ್ತೇದಾರ್ ಆರ್.ಎಸ್. ಪಂಚಮುಖಿ ಭಾಗವಹಿಸಿದ್ದರು. ಅಧ್ಯಕ್ಷ ಶಿವಾನಂದ ಆನಿಗೋಳ, ಉಪಾಧ್ಯಕ್ಷ ಎಸ್.ಬಿ.ಲದ್ದಿಗಟ್ಟಿ, ಕಿತ್ತೂರ ವಕೀಲರ ಸಂಘದ ಅಧ್ಯಕ್ಷ ಬಿ.ಬಿ ಬಿಕ್ಕನ್ನವರ, ಶ್ರೀಧರ ಲೊಕೂರ, ಎಸ್.ಎಸ್.ಮಠದ, ಝಡ್.ಎ.ಗೋಕಾಕ ಪಾಲ್ಗೊಂಡಿದ್ದರು.
ಬಿ.ಬಿ. ಹುಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕೀರಗೌಡ ಸಿದ್ಧನಗೌಡರ ನಿರೂಪಿಸಿದರು. ಎಸ್.ಎಸ್. ಆಲದಕಟ್ಟಿ ವಂದಿಸಿದರು.

ಅನ್ನಭಾಗ್ಯ ಯೋಜನೆಗೆ ಚಾಲನೆ
ಹಿರೇಬೂದನೂರ (ಬೈಲಹೊಂಗಲ):
ಇಲ್ಲಿಯ ನ್ಯಾಯಬೆಲೆ ಅಂಗಡಿಯಲ್ಲಿ ಮಡಿವಾಳೇಶ್ವರ ಸ್ವಾಮೀಜಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಅಧ್ಯಕ್ಷ ಸೋಮಪ್ಪ ಮರಗಾಲ, ಲೋಕಾಯುಕ್ತ ನಿವೃತ್ತ ಅಧಿಕಾರಿ ವಿ.ಬಿ.ಉಣ್ಣಿ, ಪಿಡಿಒ ಗುರುಪಾದ ಗಿರೆನ್ನವರ, ಸದಾನಂದ ಅಳಾಜ, ರಾಮಶಿದ್ದಪ್ಪ ನಾಯ್ಕರ, ಹಣಮಂತ ತಳವಾರ, ಯಲ್ಲಪ್ಪ ನಾಯ್ಕರ, ಉಮೇಶ ತೋಟಗಿ, ಸಂಗಪ್ಪ ಬೂದಿಹಾಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.