ಚಿಕ್ಕೋಡಿ: ಮಾನವನ ಆಕ್ರಮಣದಿಂದ ನಲುಗಿ ಹೋಗುತ್ತಿರುವ ನಿಸರ್ಗ, ಬರ ಮತ್ತು ನೆರೆಯಂತಹ ವಿಕೋಪಗಳನ್ನು ಸೃಷ್ಟಿಸುತ್ತಿದೆ. ಬರ ಮತ್ತು ನೆರೆ ಪರಿಸ್ಥಿತಿಗಳ ಸಮರ್ಪಕ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕಾರ್ಯಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ `ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸರ್ಕಾರಕ್ಕೆ ಸಲಹೆ ನೀಡಿದರು.
ಬುಧವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 66ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬರ ನಿರ್ವಹಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ರುದ್ರೇಶ್ ಘಾಳಿ ಸಾರ್ವಜನಿಕ ಧ್ವಜಾರೋಹಣ ನೇರವೇರಿಸಿ, ಪ್ರತಿಯೊಬ್ಬರಲ್ಲೂ ಭಾರತೀಯ ಎಂಬ ಭಾವನೆ ಬಂದಾಗ ದೇಶದ ಪ್ರಗತಿ ಮತ್ತು ನೆಮ್ಮದಿ ಸಾಧ್ಯ ಎಂದರು.
ಶಾಸಕ ಪ್ರಕಾಶ ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶೋಭಾ ಚೆನ್ನವರ, ಉಪಾಧ್ಯಕ್ಷ ಸುರೇಶ ಕಟ್ಟೀಕರ, ತಾ.ಪಂ. ಅಧ್ಯಕ್ಷ ವಿಲಾಸ ಮಾಳಗೆ, ಮಾಜಿ ಶಾಸಕ ದತ್ತು ಹಕ್ಯಾಗೋಳ, ತಾ.ಪಂ. ಮಾಜಿ ಅಧ್ಯಕ್ಷ ನಾಗೇಶ ಕಿವಡ, ಡಿವೈಎಸ್‌ಪಿ ಹೆಚ್.ಎನ್.ಅಮರಾಪೂರ, ಡಿಡಿಪಿಐ ಡಿ.ಎಂ. ದಾನೋಜಿ, ಆರ್‌ಟಿಓ ರಜಪೂತ್ ಕಿರಣಸಿಂಗ್, ಎಡಿಎಚ್‌ಓ ಡಾ.ವಿ.ಬಿ. ಕುಲಕರ್ಣಿ, ಉಪ ಖಜಾನಾಧಿಕಾರಿ ಎಚ್.ಎಸ್. ಸೈಯ್ಯದ್ ಮುಂತಾದವರು ಉಪಸ್ಥಿತರಿದ್ದರು. ತಹಸೀಲ್ದಾರ ರಾಜಶೇಖರ ಡಂಬಳ ಸ್ವಾಗತಿಸಿದರು. ಎನ್.ವಿ. ಶಿರಗಾಂವಕರ ನಿರೂಪಿಸಿದರು. ಬಿಇಓ ಎಸ್.ಜೆ. ಅಂಚಿ ವಂದಿಸಿದರು.
ಪಥ ಸಂಚಲನ:
ಇದಕ್ಕೂ ಮುನ್ನ ಪಿಎಸ್‌ಐ ಅನೀಲಕುಮಾರ ಎಚ್.ಡಿ. ಅವರ ನೇತೃತ್ವದಲ್ಲಿ ಆರಕ್ಷಕ ಹಾಗೂ ವಿವಿಧ ಶಾಲೆಗಳ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾ ದಳ ಕೆಡೆಟ್‌ಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಉಪವಿಭಾಗಾಧಿಕಾರಿ ರುದ್ರೇಶ್ ಘಾಳಿ ಗೌರವ ವಂದನೆ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪದಕ ವಿತರಣೆ
ಚಿಕ್ಕೋಡಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ 66ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಪ್ರಾಚಾರ್ಯ ಬಿ.ಎ. ಪೂಜಾರಿ ಧ್ವಜಾರೋಹಣ ನೇರವೇರಿಸಿ, ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಭಾರತದ ಪ್ರತಿಭೆಗಳು ಮಿಂಚುತ್ತಿದ್ದಾರೆ.
ಡಾ.ಅಬ್ದುಲ್ ಕಲಾಂ ಅವರು ಕಂಡ 2020ರ ಕನಸನ್ನು ನನಸುಗೊಳಿಸುವಲ್ಲಿ ಯುವಕರ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಹೆಚ್ಚಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಆನಂದ ಅರ‌್ವಾರೆ ಇದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆ ಹಾಗೂ ಡಿಪ್ಲೋಮಾ ಪರೀಕ್ಷೆಯ ಗಣಿತ ವಿಷಯದಲ್ಲಿ ಶೇ 100 ರಷ್ಟು ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಐ.ಕೆ.ಪಾಟೀಲ ಸ್ವಾಗತಿಸಿದರು. ಆರ್.ಎಸ್.ಮಹಿಶಾಳೆ ನಿರೂಪಿಸಿದರು.ಎಂ.ಎಸ್.ಪೀರಾಜೆ ವಂದಿಸಿದರು.
`ಸಾಮಾಜಿಕ ಪರಿವರ್ತನೆಗೆ ಮುಂದಾಗಿ~
ಚಿಕ್ಕೋಡಿ: `ಯಾವುದೇ ಒಂದು ಘಟನೆ ಅಥವಾ ವ್ಯಕ್ತಿಯ ಕುರಿತು ವಿನಾಕಾರಣ ಟೀಕೆ ಟಿಪ್ಪಣಿ ಮಾಡುತ್ತ ಕಾಲ ಹರಣೆ ಮಾಡದೇ ತನ್ನ ನಿತ್ಯ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಆತ್ಮಕಲ್ಯಾಣದ ಜತೆಗೆ ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದು ಪ್ರಾಚಾರ್ಯ ಡಾ. ಬಸವರಾಜ ಕಟಗೇರಿ ಹೇಳಿದರು.
ಬುಧವಾರ ಪಟ್ಟಣದ ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ 66ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ. ಪಿ.ಬಿ. ಮುತಾಲಿಕದೇಸಾಯಿ, ಪ್ರೊ.ವಿ.ಎಂ.ಬೂದಿಹಾಳ, ಪ್ರೊ.ಎಂ.ಎಸ್.ತೆಗ್ಗಿ, ವಿದ್ಯಾರ್ಥಿಗಳಾದ ವಿದ್ಯಾ ಮುತ್ತೆಪ್ಪಗೋಳ, ಅನಾಮಿಕ ಮಾತನಾಡಿದರು. ಪ್ರೊ. ಸುನೀಲ ಹೆಬ್ಬಾಳೆ, ಪ್ರೊ.ದರ್ಶನ ಬಿಳ್ಳೂರೆ, ಪ್ರೊ. ಎಸ್.ಎಸ್. ಭೋಜಣ್ಣವರ, ಪ್ರೊ. ಆರ್.ಕೆ. ಪಾಟೀಲ, ಪ್ರೊ. ವಿ.ಎಸ್. ಸುರ್ಪಳ್ಳಿ ಉಪಸ್ಥಿತರಿದ್ದರು. ಅಶ್ವಿನಿ ಚವಾಣ್ ನಿರೂಪಿಸಿದರು.
ಗಂಗಾಶುಗರ್: ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲೂ 66ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಖಾನೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಧ್ವಜಾರೋಹಣ ನೇರವೇರಿಸಿದರು. ಕಾರ್ಖಾನೆ ಉಪಾಧ್ಯಕ್ಷ ಅಜೀತ ದೇಸಾಯಿ, ಸಂಚಾಲಕರಾದ ಎಸ್.ಎನ್. ಸಪ್ತಸಾಗರೆ, ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಗಿರಿಗೌಡರ ಹಾಗೂ ಕಾರ್ಮಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.
ಚೌಸನ್ ಮಹಾವಿದ್ಯಾಲಯ: ಪಟ್ಟಣದ ಚೌಸನ್ ಶಿಕ್ಷಣ ಸಂಸ್ಥೆಯ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಪ್ರೊ.ಕನಕಾಚಲ ಡಿ.ಕನಕಗಿರಿ ಧ್ವಜಾರೋಹಣ ನೇರವೇರಿಸಿದರು. ಪ್ರೊ. ಎನ್.ಎಸ್. ಶಿಂಧೆ, ಎನ್.ಐ.ದಿಂಡಿಗಟ್ಟಿ, ಪ್ರೊ.ಎಸ್.ಎಂ.ಗೊಂದಿ, ಬಸವರಾಜ ಮುತ್ನಾಳ, ರವಿ ಕುರಬೇಟ್, ಪಿ.ಜಿ.ಕೊಗನೊಳೆ, ಕೃಷ್ಣಾ ಅರಗೆ, ಶ್ರೀಧರ್ ಹಲ್ಕಿ ಹಾಜರಿದ್ದರು.ವಿ. ಸೊಲ್ಲಾಪುರೆ ನಿರೂಪಿಸಿದರು. ಸಚೀನ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.