ಬೆಳಗಾವಿ: `ಸಮಾಜದ ಸಂಘಟನೆಗಾಗಿ ಎಲ್ಲರೂ ಶ್ರಮಿಸಬೇಕು~ ಎಂದು ವಿಶ್ವ ಬಂಜಾರಾ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಮನೋಹರ ಐನಾಪುರ ಕರೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಬಂಜಾರಾ ಸೇವಾ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
`ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಬಂಜಾರಾ ಸಾಂಸ್ಕೃತಿಕ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು~ ಎಂದು ಅವರು ಮನವಿ ಮಾಡಿಕೊಂಡರು.
ಅಶೋಕ ಪೂಜಾರಿ ಮಾತನಾಡಿ, `ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು~ ಎಂದರು.
ಪಿ.ಆರ್. ಜಾಧವ ಮಾತನಾಡಿ, ಸಮಾಜದ ಸಂಸ್ಕೃತಿಯನ್ನು ಉಳಿಸಿ ಕೊಂಡು ಹೋಗಬೇಕು ಹಾಗೂ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದರು.
ಲಕ್ಷ್ಮಣ ದೊಡ್ಡಮನಿ, ಶಂಕರ ಕಾರಬಾರಿ, ಲಕ್ಷ್ಮಣ ಲಮಾಣಿ, ರಾಜು ಪೂಜಾರಿ, ಪಾಂಡುಂರಂಗ ನಾಯಕ, ಬಾಲಚಂದ್ರ ಚವ್ಹಾಣ ಮತ್ತಿತರರು ಪಾಲ್ಗೊಂಡಿದ್ದರು.
ಕೋರ ಕಮಿಟಿ ಸದಸ್ಯರಾಗಿ ಎಂ.ಟಿ. ರಾಠೋಡ, ಆರ್.ಟಿ. ರಾಠೋಡ, ಬಾಲಚಂದ್ರ ಚವ್ಹಾಣ, ಅಶೋಕ ಪೂಜಾರಿ, ಕೆ.ಪಿ. ರಾಠೋಡ, ಎಸ್.ಎಲ್. ಲಮಾಣಿ ಆಯ್ಕೆಯಾದರು.
ನಗರ ಘಟಕದ ಪದಾಧಿಕಾರಿಗಳಾಗಿ ಲಕ್ಷ್ಮಣ ಲಮಾಣಿ (ಅಧ್ಯಕ್ಷ), ಪಾಂಡಪ್ಪ ಜಲಗೇರಿ, ಲಕ್ಷ್ಮಣ ಲಮಾಣಿ (ಉಪಾಧ್ಯಕ್ಷ), ಪಾಂಡುರಂಗ ನಾಯಕ (ಪ್ರಧಾನ ಕಾರ್ಯದರ್ಶಿ), ಪ್ರಭು ರಾಠೋಡ (ಕೋಶಾಧ್ಯಕ್ಷ), ಹಣಮಂತ ಲಮಾಣಿ, ರಾಮಣ್ಣ ಕಮ್ಮಾರ (ಸಂಘಟನಾ ಕಾರ್ಯದರ್ಶಿ), ಸುರೇಶ ರಾಠೋಡ (ಖಜಾಂಚಿ) ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.