ADVERTISEMENT

ಬೆಳಗಾವಿ ಚುನಾವಣಾಧಿಕಾರಿ ವೆಬ್‌ಸೈಟ್‌ನಲ್ಲಿ ಮಾಹಿತಿ ಕೊರತೆ!

ಬೆಂಗಳೂರು ಅಧಿಕಾರಿಗಳು ಅಪ್‌ಡೇಟ್‌ ಮಾಡಬೇಕೆಂಬ ಸಬೂಬು

ಶ್ರೀಕಾಂತ ಕಲ್ಲಮ್ಮನವರ
Published 12 ಮೇ 2018, 4:48 IST
Last Updated 12 ಮೇ 2018, 4:48 IST
ಅಪ್‌ಡೇಟ್‌ ಆಗದ ಬೆಳಗಾವಿ ಜಿಲ್ಲಾ ಚುನಾವಣಾ ಅಧಿಕಾರಿ ವೆಬ್‌ಸೈಟ್‌
ಅಪ್‌ಡೇಟ್‌ ಆಗದ ಬೆಳಗಾವಿ ಜಿಲ್ಲಾ ಚುನಾವಣಾ ಅಧಿಕಾರಿ ವೆಬ್‌ಸೈಟ್‌   

ಬೆಳಗಾವಿ: ಹೊಸ ತಂತ್ರಜ್ಞಾನಗಳಾದ ವೆಬ್‌ಸೈಟ್‌, ಸಾಮಾಜಿಕ ತಾಣಗಳನ್ನು ಬಳಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಆಧುನಿಕ ಸ್ಪರ್ಶ ನೀಡಲು ಕೇಂದ್ರ ಚುನಾವಣಾ ಆಯೋಗ ಹೊರಟಿದ್ದರೆ, ಇದಕ್ಕೆ ಬೆಳಗಾವಿ ಜಿಲ್ಲಾಡಳಿತದಿಂದ ಪೂರಕ ಸ್ಪಂದನೆ ದೊರಕುತ್ತಿಲ್ಲ. ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭೆಯ ಬಹುತೇಕ ಮಾಹಿತಿಗಳು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಆಗಿಲ್ಲ.

ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿ ವೆಬ್‌ಸೈಟ್‌ (http://belgaum.nic.in/english/deobelagavi/calendar.html) ಆಗಲಿ, ಜಿಲ್ಲಾಡಳಿತದ ಅಧಿಕೃತ ಜಾಲತಾಣದಲ್ಲಾಗಲಿ (http://belgaum.nic.in/english/dcoffice.html) ಬಹಳಷ್ಟು ಮಾಹಿತಿ ಸಿಗುತ್ತಿಲ್ಲ.

ಮತದಾನದ ದಿನಾಂಕವೇ ಇಲ್ಲ:

ADVERTISEMENT

ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿ ತಿಂಗಳು ಕಳೆಯುತ್ತಾ ಬಂದರೂ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿಲ್ಲ. ವೇಳಾಪಟ್ಟಿ ಅಂಕಣವನ್ನು ಕ್ಲಿಕ್‌ ಮಾಡಿದರೆ ‘ಶೀಘ್ರದಲ್ಲಿ ಬರಲಿದೆ...’ ಎನ್ನುವ ಸೂಚನಾ ಫಲಕ ಕಾಣಿಸುತ್ತದೆ. ಮತದಾನದ ದಿನಾಂಕ, ಮತ ಎಣಿಕೆಯ ಬಗ್ಗೆ ವಿವರಣೆ ಇಲ್ಲ.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವ, ಮತಪಟ್ಟಿಗೆ ಹೆಸರು ಸೇರಿಸಲು ಸಲ್ಲಿಸಲಾದ ಅರ್ಜಿಯ ಸ್ಥಿತಿಗತಿ, ಮತಗಟ್ಟೆಗಳ ವಿವರ ಹಾಗೂ ಮತಗಟ್ಟೆ ಅಧಿಕಾರಿಗಳ ವಿವರ ಯಾವೊಂದು ಮಾಹಿತಿಯೂ ನೀಡಿಲ್ಲ. ‘ರಿಸೋರ್ಸ್‌ ಕ್ಯಾನ್‌ನಾಟ್‌ ಬಿ ಫೌಂಡ್‌’ ಎನ್ನುತ್ತದೆ ವೆಬ್‌ಸೈಟ್‌.

ಮತದಾರರ ಸಂಖ್ಯೆಯೂ ಇಲ್ಲ:

ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿತ್ತು. ಅಲ್ಲಿಯವರೆಗೆ ಎಷ್ಟು ಜನ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎನ್ನುವ ಮಾಹಿತಿ ಇಲ್ಲ. 2017ರ ಜನವರಿ 1ರವರೆಗಿನ ಮಾಹಿತಿ ಮಾತ್ರ ಇದೆ. ಆ ನಂತರ ಎಷ್ಟು ಜನರು ಸೇರ್ಪಡೆಯಾಗಿದ್ದಾರೆ ಎನ್ನುವ ಅಂಶ ಇಲ್ಲ.

ಅಫಿಡವಿಟ್‌ ಮಾತ್ರ ಅಪ್‌ಡೇಟ್‌:

ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳ ನಕ್ಷೆ ಹಾಗೂ ಅಭ್ಯರ್ಥಿಗಳ ಅಫಿಡವಿಟ್‌ ಮಾತ್ರ ಅಪ್‌ಲೋಡ್‌ ಮಾಡಲಾಗಿದೆ. ಚುನಾವಣಾ ವೆಚ್ಚದ ಬಗ್ಗೆ ಅಭ್ಯರ್ಥಿಗಳು ವರದಿ ನೀಡಿದ್ದಾರೆ. ಇದರಲ್ಲಿ ಕೆಲವು ಡೌನ್‌ಲೋಡ್‌ ಆದವು. ಇನ್ನುಳಿದವುಗಳು ಆಗಲಿಲ್ಲ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ರಾಮಚಂದ್ರನ್‌ ಅವರ ನೇತೃತ್ವದಲ್ಲಿ ನಡೆದ ಸ್ವೀಪ್‌ ಅಭಿಯಾನದ ಎರಡು ಫೋಟೊಗಳು ಮಾತ್ರ ಅಪ್‌ಡೇಟ್‌ ಆಗಿವೆ.

ಚುನಾವಣಾ ವಿಭಾಗದ ತಾಂತ್ರಿಕ ಅಧಿಕಾರಿ ಮಲ್ಲಮ್ಮ ಅವರನ್ನು ಸಂಪರ್ಕಿಸಿದಾಗ, ‘ಈ ಮಾಹಿತಿಯನ್ನು ಬೆಂಗಳೂರಿನ ಚುನಾವಣಾ ಅಧಿಕಾರಿಗಳು ಅಪ್‌ಡೇಟ್‌ ಮಾಡಬೇಕು. ಕಳೆದ ಚುನಾವಣೆಗಳ ಬಗ್ಗೆ ನಮ್ಮ ಬಳಿ ಮಾಹಿತಿ ಇಲ್ಲ’ ಎಂದು ಉತ್ತರಿಸಿದರು.

ಅಫಿಡವಿಟ್‌ ಮಾತ್ರ ಅಪ್‌ಡೇಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.