ಚಿಕ್ಕೋಡಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಮತ್ತು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಡೆದ 35ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಇತ್ತೀಚೆಗೆ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಹೆಚ್.ಯು.ತಳವಾರ, ಆಡಳಿತಾಧಿಕಾರಿ ಬಿ.ವೆಂಕಟಸ್ವಾಮಿ, ಜಂಟಿ ನಿರ್ದೇಶಕ ಎಸ್. ವಿಜಯಕುಮಾರ, ಕೆಎಲ್‌ಇ ಎಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ, ಸಿ.ಬಿ.ಕೋರೆ ಪಾಲಿಟೆಕ್ನಿಕ್ ಪ್ರಾಚಾರ್ಯ ಬಿ.ಎ.ಪೂಜಾರಿ ಮುಂತಾದವರು ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಿದರು.
ಸ್ಪರ್ಧಾ ವಿಜೇತರು: ಮಹಿಳೆಯರ ವಿಭಾಗದ ವೈಯಕ್ತಿಕ ಸ್ಪರ್ಧೆಗಳು: 100 ಮತ್ತು 200 ಮೀ. ಓಟ: ಹುಬ್ಬಳ್ಳಿಯ ಶಿಲ್ಪಾ ಬಳ್ಳಾರಿ (ಪ್ರಥಮ), ಮಂಗಳೂರಿನ ಪದ್ಮಾವತಿ (ದ್ವಿತೀಯ) ಮತ್ತು ವನಶ್ರೀ(ತೃತೀಯ). 400 ಮೀ ಓಟ: ಮಂಗಳೂರಿನ ಅನಿತಾ (ಪ್ರ) ಮತ್ತು ಅಂಜಲಿ (ದ್ವಿ), ಸುಳ್ಯದ ಸುನೀಲಕುಮಾರಿ ಕೆ.ಎಸ್(ತೃ), 800 ಮೀ ಓಟ: ಮಂಗಳೂರಿನ ಅನಿತಾ (ಪ್ರ) ಮತ್ತು ಅಶ್ವಿನಿ (ದ್ವಿ), ಬಂಟ್ವಾಳದ ತೀರ್ಥಲತಾ (ತೃ), 1500 ಮೀ ಓಟ: ಮಂಗಳೂರಿನ ಅಶ್ವಿನಿ (ಪ್ರ), ಬಂಟ್ವಾಳದ ಸುಪ್ರಿತಾ (ದ್ವಿ) ಮತ್ತು ಉಡುಪಿಯ ಸುಚಿತ್ರಾ (ತೃ).
ಗುಂಡು ಎಸೆತ ಸ್ಪರ್ಧೆ: ಕಾರವಾರದ ಶ್ರೇಯಾ ಥಾಮಸೆ (ಪ್ರ), ಬಂಟ್ವಾಳದ ಪ್ರಜ್ಞಾ (ದ್ವಿ), ಮಂಗಳೂರಿನ ರೂಪಶ್ರೀ (ತೃ), ಚಕ್ರ ಎಸೆತ: ಮಂಗಳೂರಿನ ಅನಿತಾ (ಪ್ರ), ಕಾರವಾರದ ಶ್ರೇಯಾ (ದ್ವಿ), ಮೈಸೂರಿನ ಉಷಾ (ತೃ), ಜಾವಲಿನ್ ಥ್ರೋ: ಮಂಗಳೂರಿನ ನೀತಾ ಕೆ.(ಪ್ರ), ಹುಬ್ಬಳ್ಳಿಯ ಲಕ್ಷ್ಮೀದೇವಿ ಮಾನೆ (ದ್ವಿ) ಮತ್ತು ಮೂಡಬಿದರೆಯ ಸುಚಿತ್ರ (ತೃ), ಉದ್ದಜಿಗಿತ: ಮಂಗಳೂರಿನ ಶಿಲ್ಪಾ ಬಳ್ಳಾರಿ (ಪ್ರ) ಮತ್ತು ನವ್ಯಶ್ರೀ (ದ್ವಿ), ಉಡುಪಿಯ ಸುಚಿತ್ರಾ (ತೃ), ಎತ್ತರ ಜಿಗಿತ: ಧಾರವಾಡದ ಸ್ನೇಹಾ ಕೆ.(ಪ್ರ), ಮಂಗಳೂರಿನ ಭವ್ಯಶ್ರೀ ಟಿ.(ದ್ವಿ), ಮೈಸೂರಿನ ಯಾಶ್ ಎನ್.ಕೆ.(ತೃ), ಒಂದು ಕಿ.ಮಿ. ಓಟ: ಮಂಗಳೂರಿನ ಅನಿತಾ(ಪ್ರ), ಚಿಕ್ಕಮಂಗಳೂರಿನದ ತೇಜಶ್ರೀ(ದ್ವಿ) ಮತ್ತು ಮಂಗಳೂರಿನ ಚೈತ್ರಾ(ತೃ) ಸ್ಥಾನ ಪಡೆದಿದ್ದಾರೆ.
4ಗಿ100 ಮೀ. ರಿಲೆ: ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ತಂಡ (ಪ್ರ),ಉಡುಪಿಯ ನಿಟ್ಟೆ ಪಾಲಿಟೆಕ್ನಿಕ್ ತಂಡ (ದ್ವಿ), ಹುಬ್ಬಳ್ಳಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ತಂಡ (ತೃ), 4ಗಿ400 ಮೀ ರಿಲೆ: ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ತಂಡ (ಪ್ರ), ಮಂಗಳೂರಿನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ತಂಡ (ದ್ವಿ) ಮತ್ತು ಉಡುಪಿಯ ನಿಟ್ಟೆ ಪಾಲಿಟೆಕ್ನಿಕ್ ತಂಡ (ತೃ) ಸ್ಥಾನ ಗಳಿಸಿವೆ.
ಪುರುಷರ ವಿಭಾಗ: ವೈಯುಕ್ತಿಕ ಸ್ಪರ್ಧೆಗಳು: 100 ಮೀ.ಓಟ: ಪುತ್ತೂರಿನ ಪ್ರಖ್ಯಾತ ಸಾಲಿಯಾನ(ಪ್ರ), ಮಂಡ್ಯದ ಚಿನ್ಮೇಶ ಎಸ್.ಕೆ.(ದ್ವಿ), ಮಂಗಳೂರಿನ ಅಭಿಷೇಕ(ತೃ), 200 ಮೀ.ಓಟ: ಪುತ್ತೂರಿನ ಪ್ರಖ್ಯಾತ ಸಾಲಿಯಾನ(ಪ್ರ),ಮಂಗಳೂರಿನ ಅರ್ಪಿತ್(ದ್ವಿ), ಸೊರಬದ ಸೂರತ್(ತೃ), 400 ಮೀ.ಓಟ: ಮಂಗಳೂರಿನ ಚಂದ್ರಕಾಂತ(ಪ್ರ), ಮೈಸೂರಿನ ಅರುಣ .ಎಂ (ದ್ವಿ), ಜೋಯಿಡಾದ ಪ್ರಸಾದ ಹರಿಕಾಂತ (ತೃ), 800 ಮೀ.ಓಟ: ಮಂಗಳೂರಿನ ಅಶೋಕ (ಪ್ರ), ಸುಳ್ಯದ ಸ್ಮಿತೇಶ(ದ್ವಿ), ಮಂಗಳೂರಿನ ಭರತ ಕೆ.(ತೃ), 1500 ಮೀ.ಓಟ: ಮಂಗಳೂರಿನ ದೇವರಾಜ(ಪ್ರ), ಹಾಸನದ ಅರುಣ (ದ್ವಿ), ತುರುವೇಕೇರೆಯ ಸೌಭಾಗ್ಯಗೌಡ ಎಸ್.ಆರ್.(ತೃ) ಸ್ಥಾನ ಗಳಿಸಿದ್ದಾರೆ.
ಗುಂಡು ಎಸೆತ: ಉಡುಪಿ ಮನೋಜ (ಪ್ರ), ಪುತ್ತೂರಿನ ಗುರುಪ್ರಸಾದ ನಾಯಕ(ದ್ವಿ), ಕುಮಟಾದ ಜಾಕಿ ಕ್ರಿಸ್ತನ್(ತೃ), ಚಕ್ರ ಎಸೆತ: ಮಂಗಳೂರಿನ ರಿಕ್ಸಾನ್ (ಪ್ರ), ಕುಮಟಾದ ಜಾಕಿ ಕ್ರಿಸ್ತನ್ (ದ್ವಿ), ತುಮಕೂರಿನ ಸಂಜಯ ಪಿ.(ತೃ), ಜಾವಲಿನ್ ಥ್ರೋ: ಉಡುಪಿಯ ಅಶ್ರೀತ್ ಶೆಟ್ಟಿ(ಪ್ರ), ಮೈಸೂರಿನ ಗೌತಮ ನಾಯಕ್(ದ್ವಿ), ಚಿಕ್ಕೋಡಿಯ ಉಮೇಶ ದೇಶಿಂಗೆ (ತೃ), ಉದ್ದಜಿಗಿತ: ಮಂಡ್ಯದ ಚಿನ್ಮೇಶ ಎಸ್.ಕೆ.(ಪ್ರ), ಬಳ್ಳಾರಿಯ ಫಿರೋಜ್(ದ್ವಿ), ಪುತ್ತೂರಿನ ದೀಕ್ಷಿತ್ (ತೃ), ಎತ್ತರ ಜಿಗಿತ: ಉಡುಪಿಯ ರಕ್ಷಿತ ವಿಜಯ (ಪ್ರ), ಮೂಡಬಿದರೆಯ ರಿತೇಶ ಸಾಲಿಯಾನ್((ದ್ವಿ), ಸುಳ್ಯದ ಶ್ರೀಶಾಂತ ರೈ(ತೃ), 3ಕಿ.ಮೀ. ಓಟ: ಮಂಗಳೂರಿನ ದೇವರಾಜ (ಪ್ರ), ನಿಡಸೋಶಿಯ ರಾವಸಾಬ ಪಿಂಪಳೆ (ದ್ವಿ), ಬೆಂಗಳೂರಿನ ನಿರಂಜನ ಜೈನ್(ತೃ) ಸ್ಥಾನ ಗಳಿಸಿದ್ದಾರೆ.
4ಗಿ100 ಮೀ. ರಿಲೆ: ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ತಂಡ (ಪ್ರ), ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ತಂಡ (ದ್ವಿ) ಮತ್ತು ಮೈಸೂರಿನ ವಿದ್ಯಾವರ್ಧಕ ಪಾಲಿಟೆಕ್ನಿಕ್ ತಂಡ (ತೃ), 4ಗಿ400 ಮೀ. ರಿಲೆ: ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ತಂಡ (ಪ್ರ),ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ತಂಡ (ದ್ವಿ) ಮತ್ತು ಮಂಡ್ಯದ ಸರ್ಕಾರಿ ಪಾಲಿಟೆಕ್ನಿಕ್ ತಂಡ (ತೃ)ಸ್ಥಾನ ಗಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.