ADVERTISEMENT

ಮನೆಗಳ ಮೇಲೆ ಮೂಟೆಗಟ್ಟಲೆ ಕಲ್ಲು, ಬಾಟಲಿ !

ಪೊಲೀಸ್‌ ಭದ್ರತೆಯಲ್ಲಿ ತೆರವುಗೊಳಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 9:14 IST
Last Updated 21 ಡಿಸೆಂಬರ್ 2017, 9:14 IST
ಬೆಳಗಾವಿಯ ಹಲವು ಗಲ್ಲಿಗಳಲ್ಲಿ ಮಂಗಳವಾರ ನಡೆದ ಕಲ್ಲುಗಳ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಆಯುಕ್ತ ಶಶಿಧರ ಕುರೇರ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಅಮರನಾಥರೆಡ್ಡಿ ವೀಕ್ಷಿಸಿದರು.
ಬೆಳಗಾವಿಯ ಹಲವು ಗಲ್ಲಿಗಳಲ್ಲಿ ಮಂಗಳವಾರ ನಡೆದ ಕಲ್ಲುಗಳ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಆಯುಕ್ತ ಶಶಿಧರ ಕುರೇರ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಅಮರನಾಥರೆಡ್ಡಿ ವೀಕ್ಷಿಸಿದರು.   

ಬೆಳಗಾವಿ: ಕಲ್ಲು ತೂರಾಟ ಹಾಗೂ ಎರಡು ಗುಂಪುಗಳ ಘರ್ಷಣೆಯಿಂದ ಪ್ರಕ್ಷುಬ್ದಗೊಂಡಿದ್ದ ಇಲ್ಲಿನ ಖಡಕ್‌ಗಲ್ಲಿ, ಖಂಜರ್‌ಗಲ್ಲಿ, ಘೀ ಗಲ್ಲಿ, ಜಾಲಗಾರ ಗಲ್ಲಿಗಳಲ್ಲಿನ ಮನೆಗಳ ಮೇಲೆ ಹಾಗೂ ರಸ್ತೆಬದಿಯಲ್ಲಿ ಬಿದ್ದಿದ್ದ ಕಲ್ಲು, ಇಟ್ಟಿಗೆ ತುಂಡು ಹಾಗೂ ಬಾಟಲಿಗಳನ್ನು ಪೊಲೀಸರು ಬುಧವಾರ ತೆರವುಗೊಳಿಸಿದರು.

ಬಂದೋಬಸ್ತ್‌ನಲ್ಲಿ ಈ ಕಾರ್ಯ ನಡೆಯಿತು. ಅಲ್ಲಿ ಮೂಟೆಗಟ್ಟಲೆ ಕಲ್ಲು, ಬಾಟಲಿ, ಇಟ್ಟಿಗೆ ಹಾಗೂ ಟೈಲ್ಸ್‌ನ ತುಂಡುಗಳು ಪತ್ತೆಯಾದವು.

ಸೋಮವಾರ ತಡರಾತ್ರಿ ರಾತ್ರಿ ಕಿಡಿಗೇಡಿಗಳನ್ನು ತೂರಿದ್ದರು. ಘಟನೆಯಲ್ಲಿ ಎಸಿಪಿ, ಇನ್‌ಸ್ಪೆಕ್ಟರ್‌ ಹಾಗೂ ಸಬ್ ಇನ್‌ ಸ್ಪೆಕ್ಟರ್‌ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.

ADVERTISEMENT

ಈ ಗಲ್ಲಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಪಾಲಿಕೆ ಆಯುಕ್ತ ಶಶಿಧರ ಕುರೇರ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಅಮರನಾಥರೆಡ್ಡಿ, ಪಾಲಿಕೆ ಎಂಜಿನಿಯರ್‌ ಆರ್‌.ಎಸ್‌. ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.