ನಿಪ್ಪಾಣಿ: ನಗರ ಹಾಗೂ ಸುತ್ತಮುತ್ತ ಬುಧವಾರ ರಾತ್ರಿ ಸಿಡಿಲು ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ರಾತ್ರಿ ಸುಮಾರು ಒಂದು ಗಂಟೆಗೆ ಆರಂಭವಾದ ಮಳೆಯು ಸುಮಾರು ಒಂದೂವರೆ ಗಂಟೆ ಆರ್ಭಟಿಸಿತು. ಆಸ್ತಿ ಅಥವಾ ಜೀವ ಹಾನಿಯಾದ ಬಗ್ಗೆ ಇನ್ನೂವರೆಗೆ ವರದಿಯಾಗಿಲ್ಲ.
ಬಾಗವಾನ ಗಲ್ಲಿಯ ಸಮೀಪವಿರುವ ಹಳ್ಳದ ಮೇಲೆ ಹೊಸದಾಗಿ ನಿರ್ಮಿಸಿದ ಸೇತುವೆ ಮಾತ್ರ ಮಳೆಯಲ್ಲಿ ಕೊಚ್ಚಿ ಹೋಗಿದೆ.
ಬುಧವಾರ ರಾತ್ರಿ ಮಳೆಯಾಯಿತಾ ದರೂ ಗುರುವಾರ ಕಾಣಸಿಗಲಿಲ್ಲ. ಗುರುವಾರ ತುಸು ಹೊತ್ತು ದಟ್ಟ ಮೋಡಗಳು ಕವಿದಿದ್ದರೂ ರಾತ್ರಿಯವ ರೆಗೂ ಮಳೆಯಾಗಲಿಲ್ಲ.
ಆಸ್ತಮಾ: ಔಷಧಿ ವಿತರಣೆ ನಾಳೆ
ಮುನವಳ್ಳಿ: ಮೃಗಶಿರಾ ಮಳೆ ಇದೇ 8ರಂದು ಆರಂಭಗೊಳ್ಳಲಿದ್ದು, ಬೆಳಿಗ್ಗೆ 7-55 ರಿಂದ ಸಂಜಜೆ 5ರ ವರೆಗೆ ಆಸ್ತಮಾ ರೋಗಿಗಳಿಗೆ ಉಚಿತ ಔಷಧಿ ಡಾ. ನಜೀರಅಹ್ಮದ್ ತಾಸೇದ್ ಅವರ ದವಾಖಾನೆಯಲ್ಲಿ ನೀಡಲಾಗುವುದು. ಆಸ್ತಮಾ ರೋಗಿಗಳು ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.