ADVERTISEMENT

‘ಮಹದಾಯಿ ನೀರು ಕೊಡಿ’

​ಪ್ರಜಾವಾಣಿ ವಾರ್ತೆ
Published 17 ಮೇ 2018, 4:45 IST
Last Updated 17 ಮೇ 2018, 4:45 IST

ಸವದತ್ತಿ: ಮಲಪ್ರಭಾ ನದಿ ನೀರು 100 ಕಿ.ಮೀ ಹರಿಸಿದ್ದಾರೆ. ಆದರೆ ತಾಲ್ಲೂಕಿನಲ್ಲಿ ಮೂರು ಕಿ.ಮೀ ಕೂಡ ಹರಿದಿಲ್ಲ. ಎಲ್ಲರೂ ಮಹದಾಯಿ ನೀರಿನ ರಾಜಕಾರಣ ಮಾಡಿದ್ದಾರೆ. ಇದೀಗ ನೂತನ ಸರ್ಕಾರ ಅದನ್ನು ಜೋಡಣೆ ಮಾಡುವ ಮೂಲಕ ತಾಲ್ಲೂಕಿಗೆ ನೀರಾವರಿ ಮಾಡಲಿ ಎಂದು ಬೆಡಸೂರಿನ ವಿಲಾಸ ಚಿದಂಬರ ಪಾಟೀಲ ಹೇಳಿದರು.

‘ನಾಲ್ಕು ವರ್ಷಗಳ ಹಿಂದೆ ಮಲಪ್ರಭಾ ನದಿಗೆ ಮಹಾದಾಯಿ ಜೋಡಣೆ ಮಾಡುವ ಮೂಲಕ ಇಡೀ ತಾಲ್ಲೂಕಿನ ಭೂಮಿಗೆ ಶಾಶ್ವತ ನೀರಾವರಿ ಒದಗಿಸುವ ಭರವಸೆ ನೀಡಿದ್ದರು. ಆ ಭರವಸೆಯ ಮಹಡಿ ಮನೆಗೆ ಇಂದಿಗೂ ಬೆಳಕು ನೀಡಿಲ್ಲಾ. ಎಲ್ಲರು ನಡುಗೋಡೆಯ ಮೇಲೆ ಪಣತಿ ಇಡುವ ಕೆಲಸ ಮಾಡುತ್ತಿದ್ದಾರೆ. ಹೇಗೂ ಬಿಜೆಪಿ ಸರ್ಕಾರ ರಚನೆಯಾಗುವ ನಿರೀಕ್ಷೆಗಳು ಕಾಣುತ್ತಿದ್ದು, ಆದಷ್ಟು ಬೇಗ ಕೆಲಸ ಆಗಲಿ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಬಹುತೇಕ ಗ್ರಾಮ ಹಾಗೂ ಪಟ್ಟಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸಬೇಕು. ರಸ್ತೆ ಅಗಲೀಕರಣ ಕಾಮಗಾರಿಯ ಜತೆಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಯೂ ಆಗಲಿ’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.