ADVERTISEMENT

ಮಹಾರಾಷ್ಟ್ರ ಸಾರಿಗೆ ಬಂದ್: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 9:03 IST
Last Updated 10 ಜೂನ್ 2018, 9:03 IST

ಕಾಗವಾಡ : ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಶನಿವಾರ ಕರೆ ನೀಡದ್ದ ಅನಿರ್ದಿಷ್ಟಾವಧಿ ಬಂದ್‌ನಿಂದ ಮಹಾರಾಷ್ಟ್ರಕ್ಕೆ ಹೋಗಬೇಕಾದ ಪ್ರಯಾಣಿಕರು ಬಸ್‌ ಇಲ್ಲದೆ ಪರದಾಡಬೇಕಾಯಿತು.

ಚಾಲಕರು ಹಾಗೂ ನಿರ್ವಾಹಕರು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಬೇಕಿದ್ದ ಬಸ್‌ಗಳು ಕಾಗವಾಡದವರೆಗೆ ಮಾತ್ರ ಸಂಚರಿಸಿದವು.

ಸಿಂದಗಿ, ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಹುಬ್ಬಳ್ಳಿ, ಗುಳೇದಗುಡ್ಡ, ಬೆಳಗಾವಿಯಿಂದ ಮಹಾರಾಷ್ಟ್ರದ ಮಿರಜ, ಸಾಂಗಲಿ, ಪುಣೆ, ಮುಂಬೈ, ಕೊಲ್ಹಾಪುರ, ನಾಸಿಕ ಕಡೆಗೆ ಹೋಗುವ ಪ್ರಯಾಣಿಕರು ಬಸ್‌ ನಿಲ್ದಾನದಲ್ಲಿಯೇ ಠಿಕಾಣೆ ಹೂಡಿದರು. ನಂತರ ಖಾಸಗಿ ವಾಹನಳ ಮೂಲಕ ಪ್ರಯಾಣಿಕರು ಸಂಚರಿಸುತ್ತಿರುವ ದೃಶ್ಯ ಕಂಡು ಬಂತು.

ADVERTISEMENT

ಈ ಕುರಿತು ಮಹಾರಾಷ್ಟ್ರದ ಮಿರಜನಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಂಟ್ರೋಲರ್ ಅವರನ್ನು ಸಂಪರ್ಕಿಸಿದಾಗ ‘ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿರುವುದರಿಂದ ಬಸ್ ಸಂಚಾರ ಸ್ಥಗಿತಗೊಳ್ಳಿಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.