ADVERTISEMENT

ಮಿತವಾಗಿ ನೀರು ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 3:55 IST
Last Updated 7 ಜುಲೈ 2012, 3:55 IST

ರಾಯಬಾಗ: ತಾಲ್ಲೂಕಿನ ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯ ಕೈರವಾಡಿಯಲ್ಲಿ ಕುಡಿಯುವ ನೀರಿಗಾಗಿ ಗುರುವಾರ ವಿವೇಕರಾವ್ ಪಾಟೀಲ ನೂತನ ಕೊಳವೆ ಬಾವಿಗೆ ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾ. ಪಂ. ಅನುದಾನದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು. ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಬೇಕಲ್ಲದೆ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸುವಂತೆ ಕೊಳವೆ ಬಾವಿಗೆ ಚಾಲನೆ ನೀಡಿದ ವಿವೇಕರಾವ್ ಪಾಟೀಲ ಹೇಳಿ ದರು.

ತಾ.ಪಂ.ಸದಸ್ಯ ಆರ್.ಎಚ್. ಗೊಂಡೆ ಮಾತನಾಡಿ, ಗ್ರಾಮೀಣ ಪಂಚಾಯಿತಿ ವ್ಯಾಪ್ತಿ ಯಲ್ಲಿನ ನಾಗರಾಳದಲ್ಲಿ ಕುಡಿಯುವ ನೀರಿಗಾಗಿ ತಾ.ಪಂ. ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿ ಮೋಟರ್ ಅಳವಡಿಸಲಾಗುವುದು ಎಂದರು.

ಶೀಘ್ರವಾಗಿ ಕೊಳವೆ ಬಾವಿಗಳನ್ನು ಕೊರೆಸಿ ಮೋಟರ ಅಳವಡಿಸಿರಿ ಎಂದು ಸಾತಗೌಡ ಪಾಟೀಲ ಹೇಳಿದರು.
ಗ್ರಾಮೀಣ ಪಂಚಾಯಿತಿ ಅಧ್ಯಕ್ಷ ಮುರಾರಿ ಬಾವಚಿ, ಪಿ.ಡಿ.ಒ. ಬಿ.ಬಿ. ಮೊಕಾಶಿ ಬಂಡು ಪವಾರ, ಅಪ್ಪಾಸಾಬ ಕೆಂಗನ್ನವರ, ಅಶೋಕ ಪಾಟೀಲ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.