ADVERTISEMENT

ಯೋಧ ತುಕಾರಾಂ ಅಂತ್ಯಕ್ರಿಯೆ

ಲೂಧಿಯಾನದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 9:03 IST
Last Updated 13 ಏಪ್ರಿಲ್ 2018, 9:03 IST
ಸುರೇಶ ತುಕಾರಾಂ ಕಾಪಸೆ
ಸುರೇಶ ತುಕಾರಾಂ ಕಾಪಸೆ   

ನಿಪ್ಪಾಣಿ: ಪಂಜಾಬಿನ ಲೂಧಿಯಾನದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ತಾಲ್ಲೂಕಿನ ಶೇಂಡೂರ ಗ್ರಾಮದ ಸುರೇಶ ತುಕಾರಾಂ ಕಾಪಸೆ (32) ಅಂತ್ಯಕ್ರಿಯೆ ಗ್ರಾಮದಲ್ಲಿ ಗುರುವಾರ ನೆರವೇರಿತು.

ಮಂಗಳವಾರ ಮೃತಪಟ್ಟಿದ್ದ ಸುರೇಶ ಅವರ ಪಾರ್ಥಿವ ಶರೀರವನ್ನು ಲುಧಿಯಾನದಿಂದ ವಿಮಾನದ ಮೂಲಕ ಮಹಾರಾಷ್ಟ್ರದ ಪುಣೆಗೆ, ಅಲ್ಲಿಂದ ನಿಪ್ಪಾಣಿ ಮಾರ್ಗವಾಗಿ ಗುರುವಾರ ಸಂಜೆ ಸ್ವಗ್ರಾಮಕ್ಕೆ ತರಲಾಯಿತು. ಯೋಧನ ಕಳೇಬರ ಬರುತ್ತಿದ್ದಂತೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಇಡಿ ಗ್ರಾಮ ದುಖದಲ್ಲಿ ಮುಳುಗಿತು.

ನಂತರ ಯೋಧನ ಪಾರ್ಥೀವ ಶರೀರವನ್ನು ಟ್ರ್ಯಾಕ್ಟರ್‌ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆಗೆದು ಗ್ರಾಮದ ಹೊರವಲಯದಲ್ಲಿದ್ದ ಅವರ ಹೊಲದಲ್ಲಿ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಜೋಶಿ, ಸ್ಥಳೀಯ ನಗರಸಭೆ ಅಧ್ಯಕ್ಷ ವಿಲಾಸ್‌ ಗಾಡಿವಡ್ಡರ್‌, ನಗರಸಭೆ ಸದಸ್ಯರು, ಉಪತಹಶೀಲ್ದಾರ್‌ ಎನ್‌.ಬಿ.
ಗೆಜ್ಜಿ, ಸ್ಥಳೀಯ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ನಿಂಗನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಾಬಾಯಿ ಬನಸೋಡೆ, ಸದಸ್ಯರು, ಯೋಧ ಸುರೇಶ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರ, ಸಹೋದರಿಯರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.