ADVERTISEMENT

ರಾಷ್ಟ್ರೀಯ ಕಬಡ್ಡಿ: ಕರ್ನಾಟಕ ತಂಡ ನೀರಸ ಪ್ರದರ್ಶನ

ಐನಾಪುರದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 5:23 IST
Last Updated 15 ಏಪ್ರಿಲ್ 2018, 5:23 IST

ಮೋಳೆ: ಇಲ್ಲಿಗೆ ಸಮೀಪದ ಐನಾಪುರದಲ್ಲಿ ಶನಿವಾರ ಆರಂಭವಾದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನ್‌ಮೆಂಟ್‌ನ ಪ್ರಥಮ ಸುತ್ತಿನಲ್ಲಿ ಕರ್ನಾಟಕ ತಂಡದ ಪ್ರದರ್ಶನವು ಅತ್ಯಂತ ನೀರಸವಾಗಿತ್ತು. ಪಾಂಡಿಚೇರಿ ಹಾಗೂ ಹರಿಯಾಣ ತಂಡದ ಎದುರು ಪರಾಭವಗೊಂಡಿತು.

ಐನಾಪೂರದ ನ್ಯೂ ಟೈಗರ್ಸ ಕ್ರೀಡಾ ಸಂಸ್ಥೆ, ನ್ಯೂ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್ ಮತ್ತು ಬೆಳಗಾವಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯರ ರಾಷ್ಟ್ರ ಮಟ್ಟದ ಪುರುಷ ಮತ್ತು ಮಹಿಳಾ ಕಬಡ್ಡಿ ಟೂರ್ನ್‌ಮೆಂಟ್‌ ನಡೆದಿದೆ.

ಮೊದಲ ಸುತ್ತಿನ ಪಂದ್ಯದಲ್ಲಿ ಪಾಂಡಿಚೇರಿ ತಂಡದ ಆಟಗಾರರು ಆಕ್ರಮಣಕಾರಿ ಆಟವಾಡಿ 39 ಅಂಕಗಳನ್ನು ಗಳಿಸಿದರು. ಆದರೆ, ಕರ್ನಾಟಕ ತಂಡದ ಆಟಗಾರರಿಗೆ ಕೇವಲ 18 ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯವನ್ನು ಪಾಂಡಿಚೇರಿ ತಂಡವು 21 ಅಂಕಗಳಿಂದ ಗೆದ್ದುಕೊಂಡಿತು.ಇದೇ ಇನ್ನೊಂದು ಪಂದ್ಯದಲ್ಲಿ ಹರಿಯಾಣ (46) ವಿರುದ್ದ ಕರ್ನಾಟಕ ತಂಡವು (32) 14 ಅಂಕಗಳ ಅಂತರದಿಂದ ಶರಣಾಯಿತು.

ADVERTISEMENT

ಇತರ ಪಂದ್ಯಗಳು: ಉತ್ತರ ಪ್ರದೇಶ (13) ತಂಡವನ್ನು ನವದೆಹಲಿ (36) ತಂಡವು 23 ಅಂಕಗಳಿಂದ ಸೋಲಿಸಿತು. ಹಿಮಾಚಲ ಪ್ರದೇಶ (46) ತಂಡವು ತಮಿಳುನಾಡು (42) ತಂಡವನ್ನು 4 ಅಂಕಗಳಿಂದ ಪರಾಭವಗೊಳಿಸಿದೆ. ಹಿಮಾಚಲ ಪ್ರದೇಶ (38) ತಂಡವು ಉತ್ತರ ಪ್ರದೇಶ (30) ತಂಡವನ್ನು 8 ಅಂಕಗಳಿಂದ ಸೋಲಿಸಿತು.

ಮಹಿಳಾ ವಿಭಾಗ: ಚಂಡೀಗಢ (54) ತಂಡವು ತಮಿಳುನಾಡು (16) ತಂಡವನ್ನು 38 ಅಂಕಗಳಿಂದ ಸೋಲಿಸಿತು. ಕರ್ನಾಟಕ ತಂಡವು (57) ಚಂಡೀಗಢ (43) ತಂಡವನ್ನು 14 ಅಂಕಗಳಿಂದ ಸೋಲಿಸಿದೆ. ಪಶ್ಚಿಮ ಬಂಗಾಳದ (46) ತಂಡವು ತೆಲಂಗಾಣ (19) ತಂಡವನ್ನು ಸೋಲಿಸಿದೆ. ಹರಿಯಾಣ (70) ತಂಡವು ಕೇರಳ (26) ತಂಡವನ್ನು ಪರಾಭವಗೊಳಿಸಿದೆ. ಹಿಮಾಚಲ ಪ್ರದೇಶ ತಂಡವು (44) ತೆಲಂಗಾಣದ (28) ವಿರುದ್ಧ ಜಯಗಳಿಸಿದೆ.

ಫೆಡರೇಷನ್ ಕಫ್ ಅಧ್ಯಕ್ಷ ಡಾ.ಸಿದಗೌಡ ಕಾಗೆ, ಕರ್ನಾಟಕ ಕಬಡ್ಡಿ ಅಸೋಶಿಯೇಷನ್‌ ಕಾರ್ಯದರ್ಶಿ ಸಿ.ಹೊನ್ನಪ್ಪ, ಫೆಡರೇಷನ್‌ ಆಫ್ ಇಂಡಿಯಾದ ಕಾರ್ಯದರ್ಶಿ ಎಂ.ವಿ.ಪ್ರಸಾದ ಬಾಬು, ಶ್ರೀಧರ ಜೋಷಿ, ಶಿವಗೌಡ ಪಾರಶೆಟ್ಟಿ, ಧರೆಪ್ಪ ಕೆಂಪವಾಡೆ, ಸಂಜಯ ಕುಚನೂರೆ, ಚಿದಾನಂದ ಡೂಗನವರ, ವಿಕ್ರಮ್ ದೇಸಾಯಿ, ಮಹಾವೀರ ಮುಗ್ಗನವರ, ಎಂ. ವೆಂಕಟೇಶ, ಪಂದ್ಯ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.