ನಿಪ್ಪಾಣಿ: ಇಲ್ಲಿನ ದಲಿತ ಕ್ರಾಂತಿ ಸೇನೆ ಸಂಘಟನೆಯು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ರ‌್ಯಾಲಿ ನಡೆಸಿ, ಉಪವಿಭಾಗಧಿಕಾರಿಗೆ ಮನವಿ ಸಲ್ಲಿಸಿತು.ರ‌್ಯಾಲಿಯನ್ನು ಉದ್ದೇಶಿಸಿ ಸೇನೆಯ ಅಧ್ಯಕ್ಷ ಅಶೋಕಕುಮಾರ ಅಸೋದೆ ಮಾತನಾಡಿ, ಅನ್ಯಾಯದ ವಿರುದ್ಧ, ದಲಿತರ ಹಕ್ಕುಗಳ ರಕ್ಷಣೆ ಮತ್ತು ಸರ್ಕಾರದ ನಿಕ್ಷ್ರೀಯತೆಯನ್ನು ಪ್ರತಿಭಟಿಸಲು ಸಂಘಟನೆಯು ಜಾಗೃತ ವಾಗಿದೆ. ಭ್ರಷ್ಟಾಚಾರದ ವಿರುದ್ಧ ಸದಾ ಹೋರಾಡುವ ಸಂಕಲ್ಪವನ್ನು ಹೊಂದಿದೆ ಎಂದರು.
ರ‌್ಯಾಲಿಯು ಅಂಬೇಡ್ಕರ ವತ್ತದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಶೇಷ ತಹಶೀಲ್ದಾರ ಕಚೇರಿ ಎದುರು ಸಭೆ ಸೇರಿತು.
ಬಿ.ಪಿ.ಎಲ್ ರೇಷನ್ ಕಾರ್ಡುಗಳ ಸಮರ್ಪಕ ವಿತರಣೆ, ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ, ವಿಧವಾ ವೇತನ, ವದ್ಧಾಪ್ಯ ವೇತನ ಹಾಗೂ ಅಂಗವಿಕಲರ ಪಿಂಚಣಿಯ ಪುನರಾರಂಭ, ಸಕಾಲದಲ್ಲಿ ವಿದ್ಯಾರ್ಥಿಗಳ ಶಿಷ್ಯ ವೇತನ ಮಂಜೂರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವದ್ಧಿ ನಿಗಮದಿಂದ ನಿರುದ್ಯೋಗ ಯುವಕರಿಗೆ ನೀಡುವ ಸಾಲ ಸೌಲಭ್ಯದ ಗುರಿಯ ಹೆಚ್ಚಳ, ಖಾಸಗೀ ಶಿಕ್ಷಣ ಸಂಸ್ಥೆಗಳ ಡೊನೆಷನ್ ನಿಲ್ಲಿಸುವಂತೆ ಕಟ್ಟುನಿಟ್ಟಾದ ಮಾರ್ಗಸೂಚಿ ಈ ಮುಂತಾದ ಪ್ರಮುಖ ಬೇಡಿಕೆಗಳ ಒಟ್ಟು 14 ಅಂಶಗಳ ನಿವೇದನೆಯನ್ನು ಸಂಘಟನೆಯು ಬಿಡುಗಡೆಗೊಳಿಸಿತು.
ಉಪವಿಭಾಗಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.