ADVERTISEMENT

ವಿವಿಧ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಮೂಡಲಗಿ: ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2015, 6:15 IST
Last Updated 27 ಜೂನ್ 2015, 6:15 IST
ರಸ್ತೆ ಕಾಮಗಾರಿಗೆ ಜಿ.ಪಂ. ಸದಸ್ಯ ಭೀಮಶಿ ಮಗದುಮ್‌ ಭೂಮಿ ಪೂಜೆ ನೆರವೇರಿಸಿದರು
ರಸ್ತೆ ಕಾಮಗಾರಿಗೆ ಜಿ.ಪಂ. ಸದಸ್ಯ ಭೀಮಶಿ ಮಗದುಮ್‌ ಭೂಮಿ ಪೂಜೆ ನೆರವೇರಿಸಿದರು   

ಮೂಡಲಗಿ: ‘ಕಮಲದಿನ್ನಿ ಮತ್ತು ರಂಗಾ ಪುರ ಗ್ರಾಮದ ಜನರ ಬೇಡಿಕೆಯಾಗಿದ್ದ ಕಮಲದಿನ್ನಿ–ಮೂಡಲಗಿ ರಸ್ತೆ ಕಾಮ ಗಾರಿಗೆ ಅನುದಾನವನ್ನು ಬಿಡುಗಡೆ ಮಾಡುವುದರ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಶಿ ಮಗದುಮ್‌ ಹೇಳಿದರು.

ಕಮಲದಿನ್ನಿ ಗ್ರಾಮದಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ ಹಂತ 3ರ ₨2.54 ಕೋಟಿ ವೆಚ್ಚದ ಕಮಲದಿನ್ನಿ–ರಂಗಾಪುರ–ಮೂಡಲಗಿ ರಸ್ತೆ ಕಾಮಗಾ ರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಲ್ಲಿ ಅರ ಭಾಂವಿ ಕ್ಷೇತ್ರದ ಸರ್ವತೋಮುಖ ಅಭಿವ ೃ್ಧಿ ಮಾಡುವಲ್ಲಿ ಅವರ ಕಾರ್ಯವು ಶ್ಲಾಘನೀಯವಾಗಿದೆ ಎಂದರು.

ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಪ್ಪಗೋಳ, ಮುಖಂಡರಾದ ಬಸಪ್ಪ ಸಂಕನ್ನವರ, ಮೂಡಲಗಿ ಪುರ ಸಭೆ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಈರಪ್ಪ ಸಂಕನ್ನವರ, ಶ್ರೀಮಂತ ಹುಚರಡ್ಡಿ, ಪುರಸಭೆ ಸದಸ್ಯರು, ಜಿ.ಪಂ. ಸಹಾಯಕ ಎಂಜಿನಿಯರ್‌ ಆರ್.ಬಿ. ಶಿವ ರಾಯಿ, ರಮೇಶ ಪಾಟೀಲ, ಗುತ್ತಿಗೆದಾರ ಬಸು ದಾಸನ್ನವರ ಇತರರಿದ್ದರು.

ವಡೇರಹಟ್ಟಿ– ಕಲ್ಲೋಳಿ ರಸ್ತೆ ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಎಸ್‌ಸಿಪಿ ಯೋಜನೆ ಅಡಿ 3ನೇ ಹಂತದ ₨ 3.62 ಕೋಟಿ ವೆಚ್ಚದ ವಡೇರಹಟ್ಟಿಯಿಂದ ಕಲ್ಲೋಳಿವರೆಗಿನ 6.50 ಕಿ,ಮೀ. ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ವಡೇರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಾರುತಿ ತೋಳಮರಡಿ ನೆರವೇರಿಸಿದರು. ‘ವಡೇರಹಟ್ಟಿ ಗ್ರಾಮದ ಸರ್ವತೋ ಮುಖ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಶಾಸಕರು ಅನುಷ್ಠಾನ ಗೊಳಿಸಿದ್ದಾರೆ.

ಈ ರಸ್ತೆಯಿಂದ ವಡೇರ ಹಟ್ಟಿ ಗ್ರಾಮದ ಜನರು ಕಲ್ಲೋಳಿ ಮತ್ತು ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಹೆಚ್ಚು ಅನುಕೂಲವಾಗಲಿದೆ ’ ಎಂದು ತೋಳಮರಡಿ ಹೇಳಿದರು.

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಲಗಮಪ್ಪ ಬೀರನಗಡ್ಡಿ, ವಿಠ್ಠಲ ಗಿಡೋಜಿ, ಬನಪ್ಪ ವಡೇರ, ಅಡಿವೆಪ್ಪ ಹಾದಿಮನಿ, ಚಂದ್ರು ಮೋಟೆಪ್ಪಗೋಳ, ಬನಪ್ಪ ಶಿಂತ್ರೆ, ಸಿದ್ದಪ್ಪ ತೋಳಮರಡಿ, ಬನಪ್ಪ ಡೂಗನವರ, ಗೋಪಾಲ ಕುದರಿ, ಸುಭಾಷ ಕುರಬೇಟ, ಗ್ರಾಮ ಪಂಚಾಯ್ತಿ ಸದಸ್ಯ ಬನಪ್ಪ ಮಳಿವಡೇರ ಎಂಜಿನಿಯರ್ ಎಂ.ಜಿ. ಕುಲಕರ್ಣಿ, ಎಇಇ ಪಿ.ಬಿ.ವಾಸನದ, ಎಸ್.ಬಿ. ಕಮನೂರ, ಗುತ್ತಿದಾರ ಬಿ.ಬಿ.ದಾಸನವರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.