ADVERTISEMENT

ವಿಶ್ವ ರ‌್ಯಾಂಕಿಂಗ್ ಟೆನಿಸ್ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:25 IST
Last Updated 18 ಡಿಸೆಂಬರ್ 2012, 10:25 IST
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ವಿಶ್ವ ರ‌್ಯಾಂಕಿಂಗ್ ಪುರುಷರ ಟೆನಿಸ್ ಟೂರ್ನಿಗೆ ಕುಲಪತಿ ಡಾ. ಎಚ್.ಮಹೇಶಪ್ಪ, ಶಾಸಕ ಅಭಯ ಪಾಟೀಲ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಸೋಮವಾರ ಚಾಲನೆ ನೀಡಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ವಿಶ್ವ ರ‌್ಯಾಂಕಿಂಗ್ ಪುರುಷರ ಟೆನಿಸ್ ಟೂರ್ನಿಗೆ ಕುಲಪತಿ ಡಾ. ಎಚ್.ಮಹೇಶಪ್ಪ, ಶಾಸಕ ಅಭಯ ಪಾಟೀಲ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಸೋಮವಾರ ಚಾಲನೆ ನೀಡಿದರು.   

ಬೆಳಗಾವಿ: `ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊಂದಿದೆ' ಎಂದು ವಿಟಿಯು ಕುಲಪತಿ ಡಾ. ಎಸ್.ಮಹೇಶಪ್ಪ ಹೇಳಿದರು.

ಇಲ್ಲಿನ ವಿಟಿಯು ಆವರಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೆಶನ್ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಫೆಡರೆಷನ್ (ಐಟಿಎಫ್)ನ  ವಿಶ್ವ ರ‌್ಯಾಂಕಿಂಗ್ ಪುರಷರ ಟೆನ್ನಿಸ್ ಟೂರ್ನಿಗೆ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಸೋಮವಾರ ಚಾಲನೆ ನೀಡಿ  ಮಾತನಾಡಿದರು.

ವಿಟಿಯು ಆವರಣದಲ್ಲಿರುವ ಅಂತರರಾಷ್ಟ್ರೀಯ ಗುಣಮಟ್ಟದ ಟೆನಿಸ್ ಕಟ್ಟಡದ ಸಂಕೀರ್ಣ ನಾಲ್ಕು ಸಿಂಥೆಟಿಕ್  ಕೋರ್ಟ್‌ಗಳನ್ನು ಹೊಂದಿದೆ. ಕೋಚ್‌ಗಳಿಗೆ, ಮಹಿಳಾ ಹಾಗೂ ಪುರುಷ ಆಟಗಾರರಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರೇಕ್ಷಕರಿಗಾಗಿ 500 ಆಸನಗಳ ಸಾಮರ್ಥ್ಯದ ಗ್ಯಾಲರಿಯನ್ನು ನಿರ್ಮಿಸಲಾಗಿದೆ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ವಿಟಿಯು ಆವರಣದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕುಟಗಳು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಆರ್.ಆರ್.ರಾಮಸ್ವಾಮಿ ಮಾತನಾಡಿ, ವಿಟಿಯು ಆವರಣದಲ್ಲಿರುವ ಸಿಂಥೆಟಿಕ್ ಟೆನಿಸ್ ಸಂಕೀರ್ಣ ಅಂತರ ರಾಷ್ಟ್ರೀಯ ಮಟ್ಟದ ಟೂರ್ನಿ ನಡೆಸಲು ಯೋಗ್ಯವಾಗಿದೆ. ಮುಂದಿನ ದಿನಗಳಲ್ಲಿ ಚಾಲೆಂಜಿಂಗ್ ಗ್ರೂಪ್ ವಿಶ್ವ  ರ‌್ಯಾಂಕಿಂಗ್ ಟೂರ್ನಿ ಆಯೋಜಿಸಲಾಗುವುದು. ಫೆಡ್‌ರರ್, ನಡಾಲ್, ಜಾಕ್‌ವಿಕ್ ಮುಂತಾದ ಐಕಾನ್ ಆಟ ಗಾರರನ್ನು ಆಹ್ವಾನಿಸಲಾಗುವುದು ಎಂದರು.

ಭಾರತದ 32 ಅಗ್ರ ಶ್ರೇಯಾಂಕಿತ ಟೆನ್ನಿಸ್ ಆಟಗಾರರು ಹಾಗೂ ಏಳು ದೇಶಗಳ 32 ವಿದೇಶಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.ವಿಟಿಯು ಕುಲಸಚಿವ ಡಾ. ಎಸ್.ಎ. ಕೋರಿ, ಮೌಲ್ಯಮಾಪನ ಕುಲಸಚಿವ ಡಾ.ಜಿ.ಎನ್.ಕೃಷ್ಣಮೂರ್ತಿ, ಡಾ. ಬೆಟ್ಟೇಗೌಡ, ಟೂರ್ನಿ ನಿರ್ದೇಶಕ ಸುನೀಲ ಯಜಮಾನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.