ADVERTISEMENT

ವೇದಗಂಗಾ ಕಿರುಸೇತುವೆ ನಿರ್ಮಾಣ: ಹರ್ಷ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 10:09 IST
Last Updated 10 ಜುಲೈ 2013, 10:09 IST
ನಿಪ್ಪಾಣಿ: ಸಮೀಪದ ಸಿದ್ನಾಳ ಗ್ರಾಮದಲ್ಲಿಯ ವೇದಗಂಗಾ ನದಿಗೆ ಹೊಸದಾಗಿ ನಿರ್ಮಿಸಿರುವ ಕಿರು ಸೇತುವೆಯಿಂದಾಗಿ ಜನಜೀವನ ಸುಸೂತ್ರವಾಗಿ ನಡೆದಿದೆ.
ನಿಪ್ಪಾಣಿ: ಸಮೀಪದ ಸಿದ್ನಾಳ ಗ್ರಾಮದಲ್ಲಿಯ ವೇದಗಂಗಾ ನದಿಗೆ ಹೊಸದಾಗಿ ನಿರ್ಮಿಸಿರುವ ಕಿರು ಸೇತುವೆಯಿಂದಾಗಿ ಜನಜೀವನ ಸುಸೂತ್ರವಾಗಿ ನಡೆದಿದೆ.   

ನಿಪ್ಪಾಣಿ: ಸಮೀಪದ ಸಿದ್ನಾಳ ಗ್ರಾಮದಲ್ಲಿಯ ವೇದಗಂಗಾ ನದಿಗೆ ಹೊಸದಾಗಿ ನಿರ್ಮಿಸಿರುವ ಕಿರು ಸೇತುವೆಯಿಂದಾಗಿ ಜನಜೀವನ ಸುಸೂತ್ರವಾಗಿ ನಡೆದಿದೆ. ಹಳೆ ಕಿರುಸೇತುವೆ ಶಿಥಿಲಗೊಂಡಿದ್ದರಿಂದ ಬಹಳ ವರ್ಷಗಳಿಂದ ಮಳೆಗಾಲದಲ್ಲಿ ಪ್ರತಿವರ್ಷ ಸುಮಾರು ಒಂದು ತಿಂಗಳಕ್ಕೂ ಮೇಲ್ಪಟ್ಟು ಅಕ್ಕೋಳ-ಸಿದ್ನಾಳ ಮಾರ್ಗ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಹಳೆ ಕಿರು ಸೇತುವೆಯು ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋದರೂ 4 ಅಡಿ ಎತ್ತರ ನಿರ್ಮಿಸಿದ ಹೊಸ ಸೇತುವೆಯಿಂದಾಗಿ ಯಾವುದೇ ಅಡೆತಡೆಯಿಲ್ಲದೇ ಸಂಚಾರ ಸರಾಗವಾಗಿ ನಡೆದಿದೆ.

ಅಕ್ಕೋಳ, ಗಳತಗಾ ಮುಂತಾದ ಹತ್ತಾರು ಗ್ರಾಮದ ನಿವಾಸಿಗಳು ನೆರೆ ರಾಜ್ಯದ ಎಂಐಡಿಸಿಗೆ ಇದೇ ಸೇತುವೆಯ ಮೇಲಿಂದ ಹೋಗಬೇಕಾಗುತ್ತಿತ್ತು. ಅವರ ಗೋಳು ಮುಗಿದಂತಾಗಿದೆ. ಹೊಸ ಸೇತುವೆಯಲ್ಲಿ ನೀರಿನ ಶೇಖರಣೆ ಪ್ರಮಾಣ ಹೆಚ್ಚಾಗಿದ್ದರಿಂದ ರೈತರಲ್ಲಿ ಸಂತಸದ ಕಳೆ ತುಂಬಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.