ADVERTISEMENT

ಸಂಕೇಶ್ವರ: ಮಳೆಗಾಗಿ ಹೋಮ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 8:40 IST
Last Updated 20 ಜುಲೈ 2012, 8:40 IST

ಸಂಕೇಶ್ವರ: ಮಳೆಗಾಗಿ ವೈಜ್ಞಾನಿಕ ರೀತಿಯಲ್ಲಿ ವರುಣ ದೇವನನ್ನು ಒಲಿಸುವ ಯತ್ನವೊಂದು ಸಂಕೇಶ್ವರ ಸಮೀಪದ ಅಂಕಲಿ ಗ್ರಾಮದಲ್ಲಿ ಇಂದು ನಡೆಯಿತು.

ಅಂಕಲಿ ಗ್ರಾಮಸ್ಥರು ನೆಲದ ಮೇಲೆ  9 ಅಡಿ ಉದ್ದ ಮತ್ತು ಅಗಲದ ಆಕರದಲ್ಲಿ ಗೋಡೆ ನಿರ್ಮಿಸಿ ನಡುವೆ ವಿವಿಧ ಔಷಧಿಯ ಗುಣವುಳ್ಳ ಆರ್ಯುವೇದ ಗಿಡಮೂಲಿಕೆಗಳಾದ ನವಸಾಗರ, ಹತ್ತಿ ಗಿಡ, ಎಕ್ಕೆ, ಆಲದ ಮರದ ತಂಡುಗಳನ್ನು  ಮತ್ತು ಉಪ್ಪನ್ನು ಹಾಕಿ  ಅಗ್ನಿ ಸ್ಪರ್ಶ ಮಾಡಿದರು. ಉಪ್ಪಿನ ಆಗ್ನಿಯ ಹೊಗೆಯು ಮೋಡಗಳಿಗೆ ತಗುಲಿದರೆ ಮಳೆ ಬರುವುದೆಂಬ ನಂಬಿಕೆ ಇದೆ. ಈ ರೀತಿಯಾಗಿ ವರುಣ ದೇವನ ಓಲೈಕೆಗಾಗಿ ಪ್ರಯತ್ನ ಮಾಡಿದರು.

ಸಂತೋಷ ಜೋಶಿ, ಅರುಣ ಪವಾರ, ಅರುಣ ಕಿವಂಡಾ, ಕೀರ್ತಿ ಸಂಘ್ವಿ, ಪುಷ್ಪರಾಜ ಮಾನೆ ಮತ್ತು ಗ್ರಾಮಸ್ಥರು  ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.