ADVERTISEMENT

ಸಂಭ್ರಮದ ವಿಜಯ ದಶಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 10:05 IST
Last Updated 7 ಅಕ್ಟೋಬರ್ 2011, 10:05 IST
ಸಂಭ್ರಮದ ವಿಜಯ ದಶಮಿ ಆಚರಣೆ
ಸಂಭ್ರಮದ ವಿಜಯ ದಶಮಿ ಆಚರಣೆ   

ಬೆಳಗಾವಿ: ನಗರದಲ್ಲಿ ದುರ್ಗಾಮಾತೆ ಮೆರವಣಿಗೆ ಹಾಗೂ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಗುರುವಾರ ಭಕ್ತರು ವಿಜಯ ದಶಮಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಕೇಳ್ಕರಭಾಗದಲ್ಲಿ ಬೆಳಿಗ್ಗೆ ಏರ್ಪಡಿಸಿದ್ದ ದುರ್ಗಾಮಾತಾ ದೌಡ್‌ನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅದರಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ಟ್ರ್ಯಾಕ್ಟರ್‌ನಲ್ಲಿ `ದುರ್ಗೆ~ ಮೂರ್ತಿ ಇಟ್ಟುಕೊಂಡು ಭಕ್ತರು ಆಯಾ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ಯುವಕರು ದಂಡು ಮೆರವಣಿಗೆಯಲ್ಲಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿತ್ತು.

ನಗರದ ವಿವಿಧ ದೇವಸ್ಥಾನಗಳ ಪಲ್ಲಕ್ಕಿಗಳು ಮಧ್ಯಾಹ್ನದ ವೇಳೆಗೆ ದೇವಸ್ಥಾನದಿಂದ ಹೊರಟು ಸಂಜೆಯ ವೇಳೆಗೆ ಜ್ಯೋತಿ ಕಾಲೇಜಿಗೆ ಹೊಂದಿಕೊಂಡಿರುವ ಬನ್ನಿ ಮೈದಾನಕ್ಕೆ ಆಗಮಿಸಿದ್ದವು.

ಅದೇ ರೀತಿ ಕ್ಯಾಂಪ್‌ನಿಂದ ಆರಂಭಗೊಂಡ ದುರ್ಗಾಮಾತೆಯ ಮೆರವಣಿಗೆಯೂ ಬನ್ನಿ ಮೈದಾನಕ್ಕೆ ಆಗಮಿಸಿತು. ಬನ್ನಿ ಮುಡಿಯುವ ಕಾರ್ಯಕ್ರಮ ನಂತರ ಭಕ್ತರು ಪರಸ್ಪರ ಬನ್ನಿ ಹಂಚಿಕೊಂಡು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.