ADVERTISEMENT

ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:50 IST
Last Updated 22 ಮಾರ್ಚ್ 2012, 6:50 IST

ತುಕ್ಕಾನಟ್ಟಿ (ಮೂಡಲಗಿ): `ಸಮಾಜದ ಸಮಸ್ಯೆಗಳನ್ನು ಜಟಿಲಗೊಳಿಸಿದೆ ಅದಕ್ಕೆ ಪರಿಹಾರವನ್ನು ಕಂಡುಕೊಂಡು ದೇಶವನು ಪ್ರಗತಿಯತ್ತ ಸಾಗಿಸುವುದು ಜಾಣತನ~ ಎಂದು ಧಾರವಾಡ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ವಿ.ಬಿ. ಪೈ ಅವರು ಹೇಳಿದರು.

ಇಲ್ಲಿಯ ಬರ್ಡ್ಸ್ ಸಂಸ್ಥೆಯಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ `ಸಂಕಲ್ಪ-2012~ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾ ರೋಪ ಸಮಾರಂಭದ ಅವರು ಮಾತನಾಡಿದರು.ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯದ ಮೂಲಕ ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.

ಪ್ರತಿಯೊಂದು ಕ್ಷೇತ್ರದಲ್ಲಿ  ಸ್ಪರ್ಧೆ ಯಿಂದ ಕೂಡಿದ್ದು, ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯ ನಿರ್ಮಿಸಿಕೊಂಡು, ಸಮಾಜ ಮೆಚ್ಚುವಂತ ಕೆಲಸ ಮಾಡಬೇಕು ಎಂದರು.ಮುಂಬೈದ ಬರ್ಡ್ಸ್ ಸಂಸ್ಥೆಯ ಎಸ್‌ಟಿಆರ್‌ಸಿಯ ಡಾ. ವಿಜಯ ಠಾಕೂರ ಮಾತನಾಡಿ,  ಉತ್ತಮ ಸಮಾಜ ನಿರ್ಮಿಸುವ ಸಮಾಜ ಚಿಂತಕರ ಅವಶ್ಯಕತೆ ಇದೆ ಎಂದರು.

ಬೆಳಗಾವಿಯ ಕಾರೀಡಾರ್ ಯೋಜನೆಯ ನಿರ್ದೇಶಕ ರಾಘವೇಂದ್ರ ಟಿ. ಮಾತನಾಡಿದರು.
ಬರ್ಡ್ಸ್ ಸಂಸ್ಥೆಯ ಕಾರ್ಯನಿರ್ವಾ ಹಕ ನಿರ್ದೇಶಕ ಆರ್.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.  ಪ್ರಾಚಾರ್ಯ ಪ್ರೊ. ಬಿ.ಕೆ. ಬರ್ಲಾಯ ವರದಿ ವಾಚಿಸಿದರು.

ಪ್ರೊ. ಅನಿಲ ದಂತಿ, ಪ್ರೊ. ಎ.ಕೆ. ಮೋಹನ, ಪ್ರೊ. ಎಚ್.ಆರ್. ನಧಾಪ, ಆರ್.ಎಂ. ವಡೇರ ಹಾಜರಿದ್ದರು.
ಪ್ರೊ. ಎಸ್.ಎಂ. ಜಿರ್ಲಿಮಠ ಸ್ವಾಗತಿಸಿದರು. ಭಾಗ್ಯಾ  ಬರ್ಲಾಯ ನಿರೂಪಿಸಿದರು. ಮಂಜುಳಾ ಬೆಳವಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.