ADVERTISEMENT

ಸ್ಕೇಟಿಂಗ್: ಬೆಂಗಳೂರು ತಂಡ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 12:39 IST
Last Updated 11 ಡಿಸೆಂಬರ್ 2012, 12:39 IST

ಬೆಳಗಾವಿ: ನಗರದಲ್ಲಿ ನಡೆದ ರಾಜ್ಯಮಟ್ಟದ 28ನೇ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಹಾಗೂ ಆಯ್ಕೆ ಟ್ರಯಲ್ಸ್‌ನಲ್ಲಿ ಬೆಂಗಳೂರು ಜ್ಲ್ಲಿಲಾ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಮೈಸೂರು ಹಾಗೂ ಬೆಳಗಾವಿ ಜಿಲ್ಲಾ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡವು.

ಬೆಂಗಳೂರು ಜಿಲ್ಲಾ ತಂಡವು 375 ಪಾಯಿಂಟ್ ಗಳಿಸಿ ಟ್ರೋಫಿ ಗೆದ್ದುಕೊಂಡಿತು. ಮೈಸೂರು ತಂಡಕ್ಕೆ 344 ಪಾಯಿಂಟ್ ಹಾಗೂ ಬೆಳಗಾವಿ ಜಿಲ್ಲಾ ತಂಡಕ್ಕೆ 67 ಪಾಯಿಂಟ್‌ಗಳು ಲಭಿಸಿದವು.

ಭಾರತೀಯ ರೋಲರ್ ಸ್ಕೇಟಿಂಗ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮ್ ಸಬಾಸ್ಟಿನ್, ಕರ್ನಾಟಕ ರೋಲರ್ ಸ್ಕೇಟಿಂಗ್ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಭಾರತ್, ಕೆಆರ್‌ಎಸ್‌ಎ ಜಂಟಿ ಕಾರ್ಯದರ್ಶಿ, ಚೀಫ್ ರೆಫರಿ ಎನ್. ಸತ್ಯನಾರಾಯಣ  ಬಹುಮಾನ ಪ್ರದಾನ ಮಾಡಿದರು. ಜ್ಯೋತಿ ಚಿಂಡಕ್, ರಮೇಶ ಚಿಂಡಕ್, ಅಮಿತ ಶರ್ಮಾ, ವಿಶಾಲ್ ಶರ್ಮಾ, ಸೂರ್ಯಕಾಂತ ಹಿಂಡಲಗೇಕರ, ಶಶಿಧರ ಪೋಳ, ವಿಶಾಲ್ ವೇಸನೆ ಮತ್ತಿತರರು ಹಾಜರಿದ್ದರು.

ಪ್ರೇರಣಾಗೆ ಬೆಳ್ಳಿ ಪದಕ
ಬೆಳಗಾವಿ: ಪಂಜಾಬಿನ ಅಮೃತಸರದಲ್ಲಿ ಈಚೆಗೆ ನಡೆದ ಸಿಬಿಎಸ್‌ಇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಕೆಎಲ್‌ಇ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿ ಪ್ರೇರಣಾ ಭಟ್ ಬೆಳ್ಳಿ ಪದಕಗೆದ್ದುಕೊಂಡಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 500 ಮೀಟರ್ ರಿಂಕ್ 2ರಲ್ಲಿ ಪ್ರೇರಣಾ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಸೂರ್ಯಕಾಂತ ಹಿಂಡಲಗೇಕರ, ವಿಶಾಲ್ ವೇಸನೆ, ಶಶಿಧರ ಪೋಳ ಮಾರ್ಗದರ್ಶನದಲ್ಲಿ ಪ್ರೇರಣಾ ಭಟ್ ಅವರು ನಗರದ ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿ ಸ್ಕೇಟಿಂಗ್ ರಿಂಕ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಾಧನೆಗೈದ ಬಾಲಕಿಯನ್ನು ಕೆಎಲ್‌ಇ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಯೋಜಕಿ ಪ್ರೀತಿ ದೊಡ್ಡವಾಡ, ಪ್ರಾಚಾರ್ಯೆ ಆರತಿ ಮಿಶ್ರಾ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.