ADVERTISEMENT

ಹಾಲು ಸುರಿದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 3:37 IST
Last Updated 12 ಜೂನ್ 2018, 3:37 IST
ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ರೈತರು ಸೋಮವಾರ ರಸ್ತೆಗೆ ಹಾಲು ಸುರಿದು ಪ್ರತಿಭಟನೆ ಮಾಡಿದರು.
ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ರೈತರು ಸೋಮವಾರ ರಸ್ತೆಗೆ ಹಾಲು ಸುರಿದು ಪ್ರತಿಭಟನೆ ಮಾಡಿದರು.   

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಗೋಕುಲ ದೂಧ್‌ ಸಂಘದವರು ಕಳೆದೆರಡು ದಿನಗಳಿಂದ ಹಾಲು ಖರೀದಿಸುವುದನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ರೈತರು ಸೋಮವಾರ ರಸ್ತೆಗೆ ಹಾಲು ಸುರಿದು ಪ್ರತಿಭಟನೆ ಮಾಡಿದರು.

ಸುಮಾರು 15 ವರ್ಷಗಳಿಂದ ಗೋಕುಲ ದೂಧ್‌ ಸಂಘದವರು ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಚಿಕ್ಕೋಡಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಖರೀದಿಸುತ್ತಿದ್ದರು. ಈಗ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟ ದರ ಕುಸಿದಿರುವುದರಿಂದ ಹಾಲು ಖರೀದಿಸುವು
ದನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಮಲ್ಲಪ್ಪಾ ಬಡಿಗೇರ ಮಾತನಾಡಿ, 15 ವರ್ಷಗಳಿಂದ ಹಾಲು ಖರೀದಿಸಿದವರು ಈಗ ಏಕಾಏಕಿ ಖರೀದಿ
ಸುವುದಿಲ್ಲವೆಂದು ಹೇಳಿದರೆ ರೈತರು ಹೇಗೆ ಜೀವನ ಸಾಗಿಸಬೇಕು? ರೈತರು ಉತ್ಪಾದಿಸುತ್ತಿರುವ ಹಾಲನ್ನು ಖರೀದಿ
ಸಲು ಕೆಎಂಎಫ್‌ ಮುಂದೆ ಬರಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜು ಹರಗಣ್ಣವರ, ಶೇಖರ ಬಂಬವಾಡೆ, ಮಾಂತೇಶ ಹರಗಣ್ಣವರ, ತಮ್ಮಣ್ಣಾ ಬಂಬಲವಾಡೆ, ಕಲ್ಲಪ್ಪಾ ಬಡಿಗೇರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.