
ಡಾ.ಶಿ.ಚ.ನಂದೀಮಠ ವೇದಿಕೆ (ಗೋಕಾಕ): ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಗೋಕಾಕ ತಾಲ್ಲೂಕು ನೀಡಿರುವ ಕೊಡುಗೆ ಅಪಾರ ಎಂದು ಸಂಕೇಶ್ವರದ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಶ್ಲಾಘಿಸಿದರು.
ಇಲ್ಲಿಯ ಸರ್ಕಾರಿ ಪಿಯು ಕಾಲೇಜು ಆವಣರದಲ್ಲಿ ಕ.ಸಾ.ಪ. ಶತಮಾ ನೋತ್ಸವ ಸಂಭ್ರಮ 2014 ಆಚರಣೆ ಪ್ರಯುಕ್ತ ಗೋಕಾಕ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ 'ಗೋಕಾಕ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಗೋಕಾಕ ಜಾನಪದ ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಬೆಟಗೇರಿ ಕೃಷ್ಣಶರ್ಮರು, ಪಾರಿಜಾತ ಕಲಾವಿದ ಕುಲಗೋಡ ತಮ್ಮಣ್ಣ, ಜಾನಪದ ಕ್ಷೇತ್ರದಲ್ಲಿ ಕೌಜಲಗಿ ನಿಂಗಮ್ಮ, ಸಾಹಿತ್ಯ ಕ್ಷೇತ್ರದಲ್ಲಿ ಬಸವರಾಜ ಕಟ್ಟೀಮನಿ ಹೀಗೆಯೇ ಈ ಕರದಂಟಿನ ಭೂಮಿ ಸಿಹಿ ಗುಣ ದೊಂದಿಗೆ ವಿವಿಧ ಕ್ಷೇತ್ರಗಳಲ್ಲೂ ತನ್ನದೇ ಆದ ಪ್ರತೀತಿ ಉಳಿಸಿಕೊಂಡಿದೆ ಎಂದರು.
ಸಮಾರೋಪ ನುಡಿಗಳನ್ನಾಡಿದ ಸಾಹಿತಿ ಮಹಾಲಿಂಗ ಮಂಗಿ, ‘ಕನ್ನಡ ನಾಡಿನ ಗಂಡು ಮೆಟ್ಟಿನ ನೆಲ ಗೋಕಾವಿ ನಾಡು ಕನ್ನಡ ಮತ್ತು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಯನ್ನು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕನಂದಿಯ ಶ್ರೀ ಸಿದ್ಧಾರೂಢ ದರ್ಶನ ಪೀಠದ ಸಹಜಾ ನಂದ ಸ್ವಾಮೀಜಿ ಆಶೀರ್ವಚನ ನೀಡಿ ದರು. ಸಮ್ಮೇಳನಾಧ್ಯಕ್ಷ ಡಾ. ಎಸ್.ಬಿ. ತೋಟದ, ಬಸಗೌಡ ಪಾಟೀಲ (ಕಲ್ಲೋಳಿ), ಡಾ. ರಾಜೇಂದ್ರ ಸಣ್ಣಕ್ಕಿ, ಯಾದವಾಡದ ಈಶ್ವರ ಕತ್ತಿ, ಅಶೋಕ ಲಗಮಪ್ಪಗೋಳ, ಎಸ್.ಎಸ್.ಅಂಗಡಿ, ಪ್ರೊ.ಸುಭಾಷ ಚಾಳೇಕರ ಇತರರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಕೊನೆ ಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಹಾಗೂ ಕಳೆದ ಏಪ್ರೀಲ್‌ನಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಪ್ರತಿಭಾ ನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಕಸಾಪ ಗೋಕಾಕ ಘಟಕದ ಕೋಶಾಧ್ಯಕ್ಷ ಮಲ್ಲಿಕಾರ್ಜುನ ಈಟಿ ಸ್ವಾಗತಿಸಿದರು. ರಮೇಶಗೌಡ ಪಾಟೀಲ ಹಾಗೂ ಪ್ರೊ.ಸುರೇಶ ಹನ ಗಂಡಿ ನಿರೂಪಿಸಿದರು. ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಬಾಲಶೇಖರ ಬಂದಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.