ADVERTISEMENT

ಬೆಳಗಾವಿ: 22 ಶಾಲೆಗಳ ಅಭಿವೃದ್ಧಿಗೆ ₹ 4.16 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 8:11 IST
Last Updated 23 ಜುಲೈ 2019, 8:11 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ಇಲ್ಲಿನ ಗ್ರಾಮೀಣ ಮತಕ್ಷೇತ್ರದ 22 ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ₹ 4.16 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಯಶಸ್ವಿಯಾಗಿದ್ದಾರೆ.

ಶಾಲೆಗಳಿಗೆ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ನಿರ್ಮಾಣ, ಬಯಲು ರಂಗಮಂದಿರ, ಕ್ರೀಡಾ ಕೊಠಡಿ, ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗಾಗಿ ಶಾಸಕರು ಹಲವು ಸಚಿವರ ಮೂಲಕ ಪ್ರಸ್ತಾವ ಸಲ್ಲಿಸಿದ್ದರು. ಸಚಿವರ ಶಿಫಾರಸಿನಂತೆ ಗಡಿ ಅಭಿವೃದ್ಧಿ ಪ್ರಾಧಿಕಾರವು ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.ಮೊದಲ ಕಂತಿನಲ್ಲಿ ₹ 1.64 ಕೋಟಿ ಅನುದಾನ ಸೋಮವಾರ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

ಬೆಳಗುಂದಿ ₹ 16.65 ಲಕ್ಷ,ಬೆನಕನಳ್ಳಿ ₹1.80 ಲಕ್ಷ,ಹಾನಗರ್ಗೆ ₹17.30 ಲಕ್ಷ, ಹಿಂಡಲಗಾ ₹ 31 ಲಕ್ಷ,ವಿಜಯನಗರ ₹ 16.40 ಲಕ್ಷ,ಬೆಕ್ಕಿನಕೇರಿ ₹ 13.45 ಲಕ್ಷ,ಕುದ್ರಿಮನೆ ₹ 14.85 ಲಕ್ಷ,ತುರಮುರಿ ₹ 13.20 ಲಕ್ಷ,ಉಚಗಾಂವ ₹ 41.75 ಲಕ್ಷ, ಅಂಬೇವಾಡಿ ₹ 13.15 ಲಕ್ಷ,ಗೋಜಗೆ ₹ 22.30 ಲಕ್ಷ, ₹ ಮಣ್ಣೂರು 41.60 ಲಕ್ಷ,ಸುಳಗೆ (ಯು) ₹ 21.05 ಲಕ್ಷ,ನಾವಗೆ ₹ 36.60 ಲಕ್ಷ,ಸಂತಿಬಸ್ತವಾಡ ₹ 26 ಲಕ್ಷ,ವಾಘವಾಡೆ ₹ 6.70 ಲಕ್ಷ,ಶಿವನಗರ ₹ 6.70 ಲಕ್ಷ,ರಾಜಹಂಸಗಡ ₹6.70 ಲಕ್ಷ,ದೇಸೂರು ₹ 17.30 ಲಕ್ಷ,ನಂದಿಹಳ್ಳಿ ₹ 17.30 ಲಕ್ಷ,ಮಾರ್ಕಂಡೇಯನಗರ (ಪ್ರೌಢಶಾಲೆ) ₹ 17.30,ಮಾರ್ಕಂಡೇಯನಗರಕ್ಕೆ (ಪ್ರಾಥಮಿಕ ಶಾಲೆ) ₹ 17.30 ಲಕ್ಷ ಮಂಜೂರಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.