ಅಥಣಿ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಮಾರಲೆಂದು ಮನೆಯಲ್ಲಿ ಸಂಗ್ರಹಿಸಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮೂಲತಃ ಹಣಮಾಪುರದ ಹಾಗೂ ಹಾಲಿ ಮದಬಾವಿ ಕುಂಬಾರ ಗುತ್ತಿಯಲ್ಲಿದ್ದ ಕರೆಪ್ಪ ಐನಾಪೂರೆ ಅಲಿಯಾಸ್ ದೇವಕತೆ ಬಂಧಿತ ಆರೋಪಿ. ಅವರಿಂದ ₹ 2.70 ಲಕ್ಷ ಮೌಲ್ಯದ 18 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನ, ಎಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ ಉಸ್ತುವಾರಿಯಲ್ಲಿ ಎಸ್‌ಐ ಕುಮಾರ ಹಾಡಕಾರ ಹಾಗೂ ಸಿಬ್ಬಂದಿ ಎಂ.ಎಚ್. ದೊಡಮನಿ, ಎ.ಎ. ಈರಕರ, ಕೆ.ಬಿ. ಶಿರಗೂರ, ಎಸ್.ಜಿ. ಮನ್ನಾಪೂರ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.