ADVERTISEMENT

ಯುವಕನ ಸಮಯಪ್ರಜ್ಞೆ: ಪ್ರಾಣಾಪಾಯದಿಂದ ಪಾರಾದ ಪರೀಕ್ಷಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:55 IST
Last Updated 20 ಸೆಪ್ಟೆಂಬರ್ 2020, 14:55 IST
ಕಿರಣ ಸಂಕ್ರಿ
ಕಿರಣ ಸಂಕ್ರಿ   

ಕೌಜಲಗಿ (ಬೆಳಗಾವಿ): ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಯ ಲಿಖಿತ ಪರೀಕ್ಷೆಗೆ ಭಾನುವಾರ ತೆರಳುತ್ತಿದ್ದ ವೇಳೆ ಯುವಕನ ಸಮಯಪ್ರಜ್ಞೆಯಿಂದ ಪರೀಕ್ಷಾರ್ಥಿಗಳು ಅಪಾಯದಿಂದ ಪಾರಾದರು.

ಸಮೀಪದ ಕಳ್ಳಿಗುದ್ದಿ ಗ್ರಾಮದ ಕಿರಣ ಅಪ್ಪಣ್ಣ ಸಂಕ್ರಿ ಅಪಾಯ ತಪ್ಪಿಸಿದವರು.

ಅವರೂ ಸೇರಿದಂತೆ 18 ಮಂದಿ ಕ್ರೂಷರ್ ವಾಹನದಲ್ಲಿ ಹೋಗುವಾಗ ಚಾಲಕ ಕೆಲಕಾಲ ಮೂರ್ಛೆ ಹೋಗಿದ್ದರಿಂದ ಅಪಾಯ ಎದುರಾಗಿತ್ತು.

ADVERTISEMENT

‘ವಾಹನ ಚಾಲಕನ ನಿಯಂತ್ರಣ ತಪ್ಪುತ್ತಿದ್ದುದ್ದನ್ನು ಗಮನಿಸಿದ ಪಕ್ಕದಲ್ಲಿದ್ದ ಕಿರಣ್ ಅದನ್ನು ಕೂಡಲೇ ನಿಯಂತ್ರಿಸಿದರು. ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದರು. ಎಲ್ಲರೂ ಸೇರಿ ಚಾಲಕನಿಗೆ ಆರೈಕೆ ಮಾಡಿದೆವು. ಬಳಿಕ ಕಿರಣ್‌ ಬೆಳಗಾವಿವರೆಗೂ ವಾಹನ ಚಲಾಯಿಸಿಕೊಂಡು ಹೋದರು. ಎಲ್ಲರೂ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾದೆವು’ ಎಂದು ಇಲ್ಲಿನ ಪರೀಕ್ಷಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.