ಹಿರೇಬಾಗೇವಾಡಿ: ಸಮೀಪದ ಹಲಗಾ ಗ್ರಾಮದ ಬಳಿ ಮಂಜುನಾಥ ರೈಸ್ ಮಿಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಲಾರಿ ಹಾಯ್ದು 22 ಕುರಿಗಳು ಮೃತಪಟ್ಟಿವೆ.
ಚಿಕ್ಕೋಡಿ ತಾಲ್ಲೂಕಿನ ಅಂಬಲಜರಿ ಗ್ರಾಮದ ರಾಮಾ ಬೀರಪ್ಪ ಪೂಜೇರಿ ಅವರಿಗೆ ಸೇರಿದ ಕುರಿಗಳು ಸರ್ವಿಸ್ ರಸ್ತೆ ಮೇಲೆ ಹೊರಟಾಗ, ನಾಯಿಗೆ ಬೆದರಿ ಹೆದ್ದಾರಿ ಮೇಲೆ ಓಡಿವೆ. ಧಾರವಾಡ ಕಡೆಯಿಂದ ಬೆಳಗಾವಿಯತ್ತ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳಿಗೆ ಹಾಯ್ದಿದ್ದರಿಂದ 22 ಕುರಿಗಳು ಮೃತಪಟ್ಟಿದ್ದು, 15 ಕುರಿಗಳು ಗಾಯಗೊಂಡಿವೆ.
ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.