ADVERTISEMENT

ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಷಷ್ಟ್ಯಬ್ದಿ ಸಮಾರಂಭ: 4 ಕೃತಿಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 15:08 IST
Last Updated 25 ಅಕ್ಟೋಬರ್ 2021, 15:08 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಕೃಷ್ಣೆಯ ಮಡಿಲು’, ‘ಚುಟುಕು ಚೇತನ’, ‘ವಚನ ಬೆಳಕು’ ಮತ್ತು ‘ಶ್ರಾವಣ ಸಿಂಚನ’ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಕೃಷ್ಣೆಯ ಮಡಿಲು’, ‘ಚುಟುಕು ಚೇತನ’, ‘ವಚನ ಬೆಳಕು’ ಮತ್ತು ‘ಶ್ರಾವಣ ಸಿಂಚನ’ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು   

ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಷಷ್ಟ್ಯಬ್ದಿ ಸಮಾರಂಭ ಭಾನುವಾರ ನಡೆಯಿತು. ಜಿಲ್ಲಾ ಲೇಖಕಿಯರ ಸಂಘ, ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಅಥಣಿಯ ಅಲಿಬಾದಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕೃಷ್ಣೆಯ ಮಡಿಲು’, ‘ಚುಟುಕು ಚೇತನ’, ‘ವಚನ ಬೆಳಕು’ ಮತ್ತು ‘ಶ್ರಾವಣ ಸಿಂಚನ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಲ್.ಎಸ್. ಶಾಸ್ತ್ರಿ, ‘ಸಿಟ್ಟುಗೆದ್ದವ ವಿವೇಕಿಯಾಗುತ್ತಾನೆ; ಸಿಟ್ಟಿಗೆದ್ದವ ಅವಿವೇಕಿ ಆಗುತ್ತಾನೆ. ಗೊಮ್ಮಟನಂತೆ ಎದೆಯುಬ್ಬಿಸಿ ಬೆತ್ತಲಾಗಿ ನಿಲ್ಲಲು ಧೈರ್ಯ ಬೇಕು. ಭವ ಬಂಧನದಿಂದ ನಿಜಭಕ್ತನಾದವಗೆ ಶಿವಧ್ಯಾನ ಸಾಕು’ ಎಂದು ಕೇಳಿದರು.

ಮುಖಂಡ ಎಸ್.ಸಿ. ಮಾಳಗಿ, ‘ಕವನಸಂಕಲನಗಳಲ್ಲಿ ಡಾ.ಪಿ.ಬಿ. ಗವಾನಿ ಅವರು ರಚಿಸಿದ ರೇಖಾಚಿತ್ರಗಳು ಕವಿತೆಗಳ ಅರ್ಥವನ್ನು ಗಟ್ಟಿಗೊಳಿಸಿವೆ’ ಎಂದರು.

ADVERTISEMENT

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಜಿ. ಕೆಂಪಣ್ಣವರ ಕೃತಿಗಳನ್ನು ಪರಿಚಯಿಸಿದರು. ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮಳಗಲಿ ಅವರು ಕವಿ ಅಲಿಬಾದಿ ಅವರನ್ನು ಸತ್ಕರಿಸಿದರು.

ನಿವೃತ್ತ ಎಸ್ಪಿ ಪಿ.ಬಿ. ಯಲಿಗಾರ, ಸಾಹಿತಿಗಳಾದ ಸ.ರಾ. ಸುಳಕೂಡೆ, ಎಂ.ವೈ. ಮೆಣಸಿಣಕಾಯಿ, ಬಸವರಾಜ ಸುಣಗಾರ, ಎಲ್.ವಿ. ಪಾಟೀಲ, ರಾಜು ಬಾಗೇವಾಡಿ, ಬಿ.ಕೆ. ಮಲಾಬಾದಿ, ರವೀಂದ್ರ ತೋಟಗೇರ, ಡಾ.ವಿಜಯ ಪೂಜಾರ, ಸುನಿತಾ ಮಾಳಗಿ, ದಿನೇಶಪಾಲ ಸಿಂಗ್, ಜಯಪ್ರಕಾಶ ಅಬ್ಬಿಗೇರಿ, ಜಯಶ್ರೀ ನಿರಾಕಾರಿ, ರಾಜನಂದಾ ಗಾರ್ಗಿ, ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ರೇಣುಕಾ ಮರಾಠೆ, ಡಾ.ಅನ್ನಪೂರ್ಣಾ ಹಿರೇಮಠ ಇದ್ದರು.

ಮಹಾನಂದಾ ಪರುಶೆಟ್ಟಿ ಮತ್ತು ಅನ್ನಪೂರ್ಣಾ ಮಳಗಲಿ ವಚನ ಪ್ರಸ್ತುತ‍‍ಪಡಿಸಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾವತಿ ಸೋನೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ ನಿರೂಪಿಸಿದರು. ಭಾರತಿ ಅ.ಅಲಿಬಾದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.