ADVERTISEMENT

ಮೂರು ದಿನಗಳಲ್ಲಿ ಐವರು ಸಾವು: ಅತಂಕ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:11 IST
Last Updated 20 ಏಪ್ರಿಲ್ 2021, 17:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೂಡಲಗಿ: ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮೂರು ದಿನಗಳ ಅಂತರದಲ್ಲಿ ಐವರು ಸಾವಿಗೀಡಾಗಿರುವುದು ಗ್ರಾಮಸ್ಥರ ಆತಂಕ್ಕೆ ಕಾರಣವಾಗಿದೆ.

ಐವರಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬನಪ್ಪ ರೆಬೋಜಿ ಮಳ್ಳಿವಡೆಯರ ಭಾನುವಾರ ಮತ್ತು ಪಿಡಿಒ ಬಾಳಪ್ಪ ಭೀಮರಾಯಪ್ಪ ಗಡದನ್ನವರ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಅಲ್ಲಿ ಸ್ಮಶಾನ ಮೌನ ಮನೆ ಮಾಡಿದೆ.

‘ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ 180 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿತ್ತು. ಇವರಲ್ಲಿ ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಮಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸಿ.ಆರ್. ಕುಂಬಾರ, ‘ಲಸಿಕೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಉಹಾಪೋಹಗಳನ್ನು ಹರಿಬಿಡಲಾಗುತ್ತಿದೆ. ಜನರಲ್ಲಿ ಬಂದಿರುವ ತಪ್ಪು ಕಲ್ಪನೆ ನಿವಾರಿಸಲು ಏ.21ರಂದು (ಬುಧವಾರ) ಆ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ ತಪಾಸಣೆ ಶಿಬಿರವನ್ನು ನಡೆಸಲಾಗುವುದು. ಜನರಲ್ಲಿರುವ ಆತಂಕ ದೂರ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.