ADVERTISEMENT

ಜಿಐಟಿಗೆ ₹ 5 ಲಕ್ಷ ಅನುದಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 11:12 IST
Last Updated 2 ಏಪ್ರಿಲ್ 2021, 11:12 IST
ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ₹ 5 ಲಕ್ಷ ಅನುದಾನ ಪಡೆದ ಬೆಳಗಾವಿಯ ಕೆಎಲ್‌ಎಸ್‌ ಜಿಐಟಿ ತಂಡ
ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ₹ 5 ಲಕ್ಷ ಅನುದಾನ ಪಡೆದ ಬೆಳಗಾವಿಯ ಕೆಎಲ್‌ಎಸ್‌ ಜಿಐಟಿ ತಂಡ   

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗ ಅಭಿವೃದ್ಧಿಪಡಿಸಿದ ‘ಸ್ಮಾರ್ಟ್ ಸಂಪರ್ಕ್’ ಎಂಬ ಆರಂಭಿಕ ಕಲ್ಪನೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ– ಕೃಷಿ ಮತ್ತು ಸಂಬಂಧಿತ ವಲಯಗಳ ಪುನರುಜ್ಜೀವನಗೊಳಿಸುವಿಕೆ (ಆರ್‌ಕೆವಿವೈ–ಆರ್‌ಎಎಫ್‌ಟಿಎಆರ್‌) ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿಕ-ಅಗ್ರಿ ಬಿಸಿನೆಸ್ ಇನ್ಕ್ಯುಬೇಟರ್‌ ವತಿಯಿಂದ ₹ 5 ಲಕ್ಷ ಅನುದಾನ ದೊರೆತಿದೆ.

‘ಸ್ಮಾರ್ಟ್ ಸಂಪರ್ಕ್’ ಇದೊಂದು ಐಸಿಟಿ ಆಧಾರಿತ ಯೋಜನೆಯಾಗಿದೆ. ತಂತ್ರಜ್ಞಾನದಲ್ಲಿನ ಆವಿಷ್ಕಾರಗಳನ್ನು ಬಳಸಿಕೊಂಡು ರೈತರ ಪ್ರಶ್ನೆಗಳಿಗೆ ಮಾಹಿತಿ ಮತ್ತು ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದೆ. ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಪ್ರೊ.ಪ್ರತಿಜ್ಞ್ಯ ಅಜವಾನ ಮತ್ತು ಡಾ.ವೀಣಾ ದೇಸಾಯಿ ಅವರ ಮೇಲ್ವಿಚಾರಣೆಯಲ್ಲಿ 3ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಆರ್ಯನ್ ಕಾರ್ಚಿ ಅವರು ಈ ಪ್ರಾರಂಭಿಕ ಕಲ್ಪನೆಯನ್ನು ರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT