ADVERTISEMENT

‘ಬಿಜೆಪಿ ಅಧಿಕಾರಕ್ಕೆ ಬಂದರೆ ಯರಗಟ್ಟಿ ತಾಲ್ಲೂಕು ಖಚಿತ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 8:50 IST
Last Updated 19 ಫೆಬ್ರುವರಿ 2018, 8:50 IST

ಯರಗಟ್ಟಿ: ‘ಸವದತ್ತಿ ತಾಲ್ಲೂಕು ಕೇಂದ್ರಕ್ಕೆ ಯರಗಟ್ಟಿ ಭಾಗದ ಕಟ್ಟಕಡೆಯ ಹಳ್ಳಿಗಳು 60ಕ್ಕಿಂತ ಹೆಚ್ಚು ಕಿ.ಮೀ ದೂರದಲ್ಲಿವೆ. ಹಾಗಾಗಿ ಯರಗಟ್ಟಿ ತಾಲ್ಲೂಕು ಆಗಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ತಾಲ್ಲೂಕು ಕೇಂದ್ರವಾಗಿ ಘೋಷಿಸಲಾಗುವುದು’ ಎಂದು ಸಂಸದ ಸುರೇಶ ಅಂಗಡಿ ಭರವಸೆ ನೀಡಿದರು.

ಯರಗಟ್ಟಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲ್ಲೂಕು ರಚನೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿದ ಅವರು, ‘ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯರಗಟ್ಟಿ ತಾಲ್ಲೂಕು ಕೇಂದ್ರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿತ್ತು, ಆಗ ಸ್ವಲ್ಪದರಲ್ಲಿ ಕೈತಪ್ಪಿತು. ಬರುವ ದಿನಗಳಲ್ಲಿ ಬಿಜೆಪಿ ಅದನ್ನು ಸಾಕಾರ ಮಾಡಲಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಅಜೀತಕುಮಾರ ದೇಸಾಯಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಈರಣ್ಣ ಚಂದರಗಿ, ಎಪಿಎಂಸಿ ಉಪಾದ್ಯಕ್ಷ ಚಂದ್ರ ಶೇಖರ ಅಳಗೋಡಿ, ಎಂ.ಎಂ. ಜಮಾದಾರ, ಗೌಡಪ್ಪ ಉದಪುಡಿ, ವೆಂಕಟೇಶ ದೇವರಡ್ಡಿ, ವೆಂಕಣ್ಣ ಕೊಪ್ಪದ, ಶಿವಾನಂದ ಕರಿಗೊಣ್ಣರ, ರಫೀಕ್ಡಿ .ಕೆ, ಸಿದ್ದಪ್ಪ ದೇವರಡ್ಡಿ, ಚೇತನ ಜಕಾತಿ, ಶಿವಾನಂದ ಕರ್ಜಗಿಮಠ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.