ADVERTISEMENT

ಬೆಳಗಾವಿ: 600 ಚೀಲ ‘ಅನ್ನಭಾಗ್ಯ’ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:14 IST
Last Updated 15 ಏಪ್ರಿಲ್ 2019, 15:14 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಳಗಾವಿ: ಇಲ್ಲಿನ ಜಟ್‌ಪಟ್‌ ಕಾಲೊನಿಯ ಗೋದಾಮಿನ ಮೇಲೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಮೂಟೆ ‘ಅನ್ನಭಾಗ್ಯ’ ಪಡಿತರ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.

ಅದೇ ಕಾಲೊನಿಯ ಶೇಖರ ಕಬಟೆ ಹಾಗೂ ಕೊಲ್ಲಾಪುರದ ಟ್ರಕ್ ಚಾಲಕ ಕಂ ಮಾಲೀಕ ಕಿರಣ ದಿಲೀಪ ಪಾಟೀಲ ಬಂಧಿತರು. ಅವರಿಂದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್‌ ಗುರುರಾಜ ಕಲ್ಯಾಣಶೆಟ್ಟಿ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT