ADVERTISEMENT

ಯಮಕನಮರಡಿ | ಅಧಿಕಾರಿಗಳ ಗೈರು; ಗ್ರಾಮಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 14:33 IST
Last Updated 23 ಅಕ್ಟೋಬರ್ 2024, 14:33 IST
   

ಯಮಕನಮರಡಿ: ಗ್ರಾಮಸಭೆಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಲಿಖಿತವಾಗಿ ಪತ್ರ ನೀಡಿದರೂ ಗ್ರಾಮಸಭೆಗೆ ಬರದೇ ಇರುವುದು ದುರಾದೃಷ್ಟದ ಸಂಗತಿ.  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಹ ಗ್ರಾಮಸಭೆಗೆ ನೋಡಲ್ ಅಧಿಕಾರಿಗಳು ಗೈರು ಇರುವುದರಿಂದ ಸಭೆ ಮುಂದೂಡಿ ಎಂದು ಯಮಕನಮರಡಿ ವಾರ್ಡ್‌ 1 ಗ್ರಾ. ಪಂ ಸದಸ್ಯ ರವಿ ಹಂಜಿ ಆಗ್ರಹಿಸಿದರು.

ಯಮಕನಮರಡಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಾತನಾಡಿದ ಅವರು, ವಿವಿಧ ಇಲಾಖೆಯ ಅಧಿಕಾರಿಗಳು ಇಲ್ಲದೇ ಸಭೆ ಮಾಡುವುದು ತಪ್ಪು. ಸಮಸ್ಯೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಬೇಕಾಗುತ್ತದೆ. ಆದ್ದರಿಂದ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅಹವಾಲಿಗೆ ಸೂಕ್ತ ಪರಿಹಾರ ಸಿಗುವುದಿಲ್ಲ. ಹಾಗಾಹಿ ಗ್ರಾಮಸಭೆ ಮುಂದೂಡಿ ಎಂದರು.

ಪಿಡಿಒ ಶಿವಲಿಂಗ ಢಂಗ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಇಲಾಖೆಗಳಿಗೆ ಗ್ರಾಮಸಭೆಯ ಪತ್ರ ನೀಡಲಾಗಿದೆ ಮತ್ತು ಅಧಿಕಾರಿಗಳ ಸ್ಪಂದನೆ ಸಿಗುತ್ತಿಲ್ಲ. ನ.6ರಂದು ಗ್ರಾಮಸಭೆ ಮತ್ತು ನ.11ಕ್ಕೆ ಸಾಮಾನ್ಯ ಸಭೆ ಕರೆಯಲಾಗುವುದು ಎಂದರು.

ADVERTISEMENT

ಯಮಕನಮರಡಿ ಗ್ರಾ.ಪಂ ಅಧ್ಯಕ್ಷ ಆಸ್ಮಾ ಫಣಿಬಂಧ, ಉಪಾಧ್ಯಕ್ಷ ರಾಜು ಕುಂದರೆ, ಅಸ್ಲಾಂ ಪಕ್ಕಾಲಿ, ಕಿರಣ ರಜಪೂತ, ಗ್ರಾ.ಪಂ ಸದಸ್ಯರ ಕುಶಾಲ ರಜಪೂತ, ಉದಯ ನಿರ್ಮಳ, ದೇವಪ್ಪಾ ಹುನ್ನೂರಿ, ರಾಜು ಮೇತ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘಗಳ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.