
ಪ್ರಜಾವಾಣಿ ವಾರ್ತೆ
ಬೈಲಹೊಂಗಲ: ದ್ಚಿಚಕ್ರ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ಮೇಲೆ ಮಂಗಳವಾರ ಸಂಭವಿಸಿದೆ.
ತಾಲ್ಲೂಕಿನ ಕಲಭಾಂವಿ ಗ್ರಾಮದ ಸವಾರ ಸುರೇಶ ಭೀಮಶೆಪ್ಪ ಪೂಜೇರ(27), ಹಿಂಬದಿ ಸವಾರ ದೇವಪ್ಪ ಹನುಮಂತ ಅಲಕ್ಕನವರ(27), ಪಟ್ಟಿಹಾಳ ಗ್ರಾಮದ ಕಾರು ಚಾಲಕ ವಿರುಪಾಕ್ಷ ಚಂದರಗಿ ಗಂಭೀರ ಗಾಯಗೊಂಡಿದ್ದಾರೆ.
ಸವಾರರು ನಯಾನಗರ ಮಾರ್ಗದಿಂದ ಕಲಭಾಂವಿಗೆ ತೆರಳುತ್ತಿದ್ದರು. ಬೆಳವಡಿಯಿಂದ ಕಾರು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದರು. ಪ್ರಕರಣ ಬೈಲಹೊಂಗಲ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.