ADVERTISEMENT

ಅಕ್ಬರ್‌ ಪಾಷಾ ಹಿಂಡಲಗಾ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 0:15 IST
Last Updated 28 ಆಗಸ್ಟ್ 2024, 0:15 IST
<div class="paragraphs"><p>ಜೈಲು </p></div>

ಜೈಲು

   

(ಪ್ರಾಧಿನಿಧಿಕ ಚಿತ್ರ)

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿಸಿದ ಮತ್ತು ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪಿ ಅಕ್ಬರ್‌ ಪಾಷಾಗೆ ಸೋಮವಾರ ರಾತ್ರಿ ನಾಗ್ಪುರದಿಂದ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ADVERTISEMENT

ಅಕ್ಬರ್‌ ಪಾಷಾನನ್ನು ವಿಚಾರಣೆಗಾಗಿ ನಾಗ್ಪುರ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಮುಗಿದಿದ್ದರಿಂದ ವಿಮಾನದ ಮೂಲಕ ಕರೆತಂದು, ಮತ್ತೆ ಜೈಲಿಗೆ ಸೇರಿಸಲಾಯಿತು.

‘ಹಿಂಡಲಗಾ ಜೈಲಿನಲ್ಲಿರುವ ಕೊಲೆ ಅಪರಾಧಿ ಜಯೇಶ್‌ ಪೂಜಾರಿ ಉರೂಫ್‌ ಶಾಕೀರ್‌ ಮೊಹಮ್ಮದ್‌, 2023ರ ಜನವರಿ ಹಾಗೂ ಮಾರ್ಚ್‌ನಲ್ಲಿ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. ತಾನು ದಾವೂದ್‌ ಇಬ್ರಾಹಿಂನ ಸಹಚರ, ತನಗೆ ₹ 100 ಕೋಟಿ ಕೊಡದಿದ್ದರೆ ಬಾಂಬ್‌ ಸ್ಫೋಟಿಸಿ ಸಚಿವರನ್ನು ಹತ್ಯೆ ಮಾಡುವೆ ಎಂದು ಹೇಳಿದ್ದ. ಜಯೇಶ್‌ನ ಜತೆಗಿದ್ದ ಅಕ್ಬರ್‌ ಪಾಷಾನೇ ಈ ದೂರವಾಣಿ ಕರೆಯ ಸೂತ್ರಧಾರ ಎಂದು ಪೊಲೀಸರಿಗೆ ಗೊತ್ತಾಗಿತ್ತು. ವಿಚಾರಣೆಗಾಗಿ ನಾಗ್ಪುರ ಪೊಲೀಸರು ಅಕ್ಬರ್‌ ಪಾಷಾನನ್ನು ಕರೆದೊಯ್ದಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.