ADVERTISEMENT

ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು: ಪ್ರಾಚಾರ್ಯ ರಾಜು ಕಾಂಬಳೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:59 IST
Last Updated 27 ನವೆಂಬರ್ 2021, 13:59 IST
ಪರಮಾನಂದವಾಡಿಯ ಎಸ್.ಆರ್. ದಳವಾಯಿ ಪ್ರೌಢಶಾಲೆ, ಪಿಯು ಕಾಲೇಜು ಹಾಗೂ ಜೆಪಿಎಸ್ ಪದವಿ ಕಾಲೇಜಿನವರು ಸಂವಿಧಾನ ಸಮರ್ಪನಾ ದಿನವನ್ನು ಶುಕ್ರವಾರ ಆಚರಿಸಿದರು
ಪರಮಾನಂದವಾಡಿಯ ಎಸ್.ಆರ್. ದಳವಾಯಿ ಪ್ರೌಢಶಾಲೆ, ಪಿಯು ಕಾಲೇಜು ಹಾಗೂ ಜೆಪಿಎಸ್ ಪದವಿ ಕಾಲೇಜಿನವರು ಸಂವಿಧಾನ ಸಮರ್ಪನಾ ದಿನವನ್ನು ಶುಕ್ರವಾರ ಆಚರಿಸಿದರು   

ಪರಮಾನಂದವಾಡಿ: ‘ಜಗತ್ತಿನ ಅತ್ಯಂತ ದೊಡ್ಡ ಮತ್ತು ಲಿಖಿತ ಸಂವಿಧಾನ ನೀಡಿದ ಡಾ.ಬಿ.ಆರ್. ಅಂಬೇಡ್ಕರ್‌ ಕೊಡುಗೆ ಅಪಾರವಾದುದು’ ಎಂದುಪ್ರಾಚಾರ್ಯ ರಾಜು ಕಾಂಬಳೆ ಹೇಳಿದರು.

ಇಲ್ಲಿನ ಎಸ್.ಆರ್. ದಳವಾಯಿ ಪ್ರೌಢಶಾಲೆ ಮತ್ತು ಸಂಯುಕ್ತ ಪಿಯು ಕಾಲೇಜು ಹಾಗೂ ಜೆಪಿಎಸ್ ಪದವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಸಂವಿಧಾನ ಓದಬೇಕು ಮತ್ತು ಗೌರವಿಸಬೇಕು. ಸಂವಿಧಾನ ಜಾರಿಗೆ ಬಂದಿದ್ದರಿಂದಾಗಿ ಜನರಿಗೆ ರಕ್ಷಣೆ, ಭದ್ರತೆ, ವಾಕ್ ಸ್ವಾತಂತ್ರ್ಯ ಸಿಕ್ಕಿದೆ. ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.

ADVERTISEMENT

ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಬಿ. ಕುಸನಾಳೆ ಮಾತನಾಡಿದರು.

ಉಪನ್ಯಾಸಕ ವಿ.‍ಪಿ. ಮುರಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಎ.ಎಲ್. ಶಿರಹಟ್ಟಿ, ಎ.ಕೆ. ಜಯವೀರ, ರವಿ ನಾಯಕ, ಡಿ.ಕೆ. ಕಾಂಬಳೆ, ಜಿ.ಬಿ. ಚವ್ಹಾಣ, ಎಸ್.ಎಸ್. ಹಸರೆ, ಶಿವಾನಂದ ಚೌಗಲಾ, ವಿಜಯ್ ದಳವಾಯಿ, ಎಸ್.ಆರ್. ಚೌಗಲಾ, ಎಂ.ಎಚ್. ಬೂದಿಹಾಳ, ಯಾಸ್ಮಿನ್ ಮುಲ್ಲಾ, ಕೆ.ಬಿ. ಘಟಕಾಂಬಳೆ, ಎನ್.ಎಸ್. ಬಂಡಗಾರ, ಪಿ.ಎಸ್. ಹೊನವಾಡೆ, ಎ.ಐ. ಮುಲ್ಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.