ADVERTISEMENT

ಕಾಗವಾಡ | ಶಾಲೆಗೆ ಸ್ಮಾರ್ಟ್ ಟಿ.ವಿ ನೀಡಿದ ಹಳೆಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:41 IST
Last Updated 23 ಜುಲೈ 2024, 14:41 IST
ಕಾಗವಾಡದ ಜುಗೂಳ ಕೆಎಸ್‌ಎಸ್ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳು ಸ್ಮಾರ್ಟ್ ಟಿ.ವಿ ನೀಡಿದರು
ಕಾಗವಾಡದ ಜುಗೂಳ ಕೆಎಸ್‌ಎಸ್ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳು ಸ್ಮಾರ್ಟ್ ಟಿ.ವಿ ನೀಡಿದರು   

ಕಾಗವಾಡ: ತಾಲ್ಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿಯ ಪ್ರೌಢಶಾಲೆಗೆ 1997–98ನೇ ಸಾಲಿನ ವಿದ್ಯಾರ್ಥಿಗಳು ಸುಮಾರು ₹47 ಸಾವಿರ ಮೌಲ್ಯದ ಸ್ಮಾರ್ಟ್ ಟಿ.ವಿ ನೀಡಿದ್ದಾರೆ.

ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳ ಅವಶ್ಯ ಹೆಚ್ಚಾಗಿರುವುದರಿಂದ ಗುರು ಪೂರ್ಣಿಮೆಯಂದು ಟಿ.ವಿ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವಿಲಾಸ ಕಡೋಲೆ, ಮುಖ್ಯ ಶಿಕ್ಷಕ ಎಂ.ಸಿ. ಹೂಗಾರ, ಹಳೆಯ ವಿದ್ಯಾರ್ಥಿಗಳಾದ ರಾಯಗೌಡಾ ಪಾಟೀಲ, ನೀತಿನ ಪಾಟೀಲ, ದಯಾನಂದ ಅಮ್ಮಣಿಗೆ, ಸಂಭವ ಭೋಸಗೆ, ನೀತಿನ ಪಾಂಗರೆ, ಶಿವಾನಂದ ಪಾಟೀಲ, ಆನಂದ ಮಾಸೂಲೆ, ಅಜೀತ ಘಟಗೆ, ಪ್ರಮೋದ ಖೋತ, ಭಗವಂತ ಖವಟಕೊಪ್ಪ, ಸುನೀಲ ಕಾಂಬಳೆ, ರಾಜು ವಾಂಟೆ, ಅನಿತಾ ವಾಂಟೆ, ಸವೀತಾ ಲೆಂಡೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.