ADVERTISEMENT

ಅಂಗವೈಕಲ್ಯ ಶೀಘ್ರ ಪತ್ತೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 10:26 IST
Last Updated 1 ಆಗಸ್ಟ್ 2019, 10:26 IST
ಬೆಳಗಾವಿಯ ಎಪಿಡಿ ಸಂಸ್ಥೆಯಲ್ಲಿ ಈಚೆಗೆ ನಡೆದ ಸುಸ್ಥಿರ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಕುರಿತ ಕಾರ್ಯಾಗಾರವನ್ನು ಸಂಸ್ಥೆಯ ಉಪನಿರ್ದೇಶಕ ಶಿವ ಹಿರೇಮಠ ಉದ್ಘಾಟಿಸಿದರು
ಬೆಳಗಾವಿಯ ಎಪಿಡಿ ಸಂಸ್ಥೆಯಲ್ಲಿ ಈಚೆಗೆ ನಡೆದ ಸುಸ್ಥಿರ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಕುರಿತ ಕಾರ್ಯಾಗಾರವನ್ನು ಸಂಸ್ಥೆಯ ಉಪನಿರ್ದೇಶಕ ಶಿವ ಹಿರೇಮಠ ಉದ್ಘಾಟಿಸಿದರು   

ಬೆಳಗಾವಿ: ‘ಅಂಗವೈಕಲ್ಯವನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ವಯಂ ಸೇವಾ ಸಂಸ್ಥೆಗಳು ಸಾಮೂಹಿಕ ಪ್ರಯತ್ನ ಮಾಡುವುದು ಅತ್ಯಗತ್ಯವಾಗಿದೆ’ ಎಂದುಎಪಿಡಿ ಸಂಸ್ಥೆಯ ಉಪನಿರ್ದೇಶಕ ಶಿವ ಹಿರೇಮಠ ಹೇಳಿದರು.

ಇಲ್ಲಿನ ರಾಮತೀರ್ಥನಗರದ ಎಪಿಡಿ ಸಂಸ್ಥೆಯಲ್ಲಿ ನಡೆದ ಸುಸ್ಥಿರ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಥೆಗಳ ಬಲವರ್ಧನೆಯಾದರೆ ಸಮುದಾಯದಲ್ಲಿ ಅಂಗವಿಕಲರ ಅಭಿವೃದ್ಧಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸೊಸೈಟಿಯ ಸಿಇಒ ಸಿಕಂದರ್ ಮೀರಾ ನಾಯಕ ಹೇಳಿದರು.

ADVERTISEMENT

ಸಂಯೋಜಕ ಜೆ.ಎಸ್. ಒಡೆಯರ್ ಮಾತನಾಡಿ, ‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 92,594 ಅಂಗವಿಕಲರಿದ್ದಾರೆ. ವೈಕಲ್ಯವನ್ನು ಶೀಘ್ರವಾಗಿ ಪತ್ತೆ ಹಚ್ಚುವಿಕೆಯಿಂದ ಪುನಶ್ಚೇತನ ಸಾಧ್ಯವಾಗುತ್ತದೆ. ಅಂಗವಿಕಲ ಮಕ್ಕಳ ಹುಟ್ಟಿನಿಂದ 8 ವರ್ಷದಲ್ಲಿ ಬೆಳವಣಿಗೆ ಹಾಗೂ ಅಭಿವೃದ್ಧಿ ಸಾಧಿಸಲು ಸಹಾಯಕವಾಗುತ್ತದೆ’ ಎಂದರು.

ಎಪಿಡಿ ಸಂಸ್ಥೆಯ ರಮೇಶ ಗೋಂಗಡಿ, ಬೆಂಗಳೂರಿನ ಡಿಸೆಬಿಲಿಟಿ ಎನ್‌ಜಿಒ ಅಲಯನ್ಸ್ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್, ಜಿಲ್ಲಾ ಬಾಲಕಿಯರ ಸರ್ಕಾರಿ ಶ್ರವಣ ಹಾಗೂ ವಾಕ್‌ ದೋಷವುಳ್ಳ ಮಕ್ಕಳ ಶಾಲೆಯ ಸೂಪರಿಂಟೆಂಡೆಂಟ್ ಆರ್.ಬಿ. ಬನಶಂಕರಿ, ಎಪಿಡಿ ಸಂಸ್ಥೆಯ ಸಹಾಯಕ ನಿರ್ದೇಶಕ ರಮೇಶ ಗೊಂಗಡಿ, ವ್ಯವಸ್ಥಾಪಕ ಬಾಬು ನೇಜಕರ, ಸಂಯೋಜಕ ಜೆ.ಎಸ್. ಒಡೆಯರ್ ಇದ್ದರು.

ವಿದ್ಯಾರ್ಥಿ ವಿಠಲ್ ಹೊಂಬಳ ಪ್ರಾರ್ಥನಾ ಗೀತೆ ಹಾಡಿದರು. ವ್ಯವಸ್ಥಾಪಕ ಬಾಬು ನೇಜಕರ ಸ್ವಾಗತಿಸಿದರು. ಅನುಪಮಾ ವೈ. ನಿರೂಪಿಸಿದರು. ಶ್ರೀಧರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.